What will become of the children who neither expose themselves to the heat of the playground nor find peace in the shade of their homes? Only God knows.
What will become of the children who neither expose themselves to the heat of the playground nor find peace in the shade of their homes? Only God knows. There is a deep sense of anguish in the thought that, while animals are no longer to be found in this land, we ourselves are living like animals—immersed in nothing but food, sleep, fear and sexual desire.
— Shri Bharateesha P., Convenor, Rashtrotthana Media Centre
Somehow, creation came into being. We lived in the forests. Like animals, we ate whatever we could find. We did not bother to gather and store something away for the future. We trusted nature, and we lived.
ಅತ್ತ ಮೈದಾನದ ಬಿಸಿಲಿಗೂ ಮೈ ಒಡ್ಡದ, ಇತ್ತ ಮನೆಯ ನೆರಳಿನಲ್ಲೂ ನೆಮ್ಮದಿ ಕಾಣದ ಮಕ್ಕಳ ಪರಿಸ್ಥಿತಿ ಏನಾಗುವುದೋ? ಆ ದೇವರೇ ಬಲ್ಲ.
ಆಹಾರ, ನಿದ್ರೆ, ಭಯ, ಮೈಥುನಗಳಲ್ಲೇ ಮುಳುಗೇಳುತ್ತಾ ಪಶುಗಳೂ ಇಲ್ಲದ ನಾಡಲ್ಲಿ ಪಶುಗಳಾಗಿಯೇ ಬದುಕುತ್ತೇವಲ್ಲ ಎಂಬ ಖೇದ ಬಹುವಾಗಿ ಕಾಡುತ್ತದೆ.
ಶ್ರೀ ಭಾರತೀಶ ಪಿ, ಸಂಚಾಲಕ, ರಾಷ್ಟ್ರೋತ್ಥಾನ ಮಾಧ್ಯಮ ಕೇಂದ್ರ

ಹೇಗೋ ಸೃಷ್ಟಿಯಾಯಿತು. ಕಾಡಿನಲ್ಲಿದ್ದೆವು. ಪ್ರಾಣಿಗಳಂತೆ ಸಿಕ್ಕಿದ್ದು ತಿಂದೆವು. ಸಂಗ್ರಹ ಮಾಡಿ ಭವಿಷ್ಯಕ್ಕೆ ಒಂದಷ್ಟು ಎಂದು ಇಡುವ ಗೋಜಿಗೆ ಹೋಗಲಿಲ್ಲ. ಪ್ರಕೃತಿಯನ್ನು ನಂಬಿದೆವು, ಬದುಕಿದೆವು.
ನಮ್ಮನ್ನು ನಾವು ಹೆಚ್ಹೆಚ್ಚು ನಂಬಲು ಪ್ರಾರಂಭಿಸಿದಾಗ, ಸಂಗ್ರಹ, ರಕ್ಷಣೆ ಅಂತೆಲ್ಲ ಶುರುವಿಟ್ಟುಕೊಂಡು ಬೇಲಿ ಹಾಕಿ ಗದ್ದೆ ಮಾಡಿದೆವು. ಗದ್ದೆ ನಷ್ಟದಾಯಕ ಅಂತ ತೋಟಕ್ಕೆ ಜಿಗಿದೆವು. ಕೊನೆಗೆ ಕೃಷಿ ಬಿಸಿಲು, ಮಳೆ, ಗಾಳಿಯೊಂದಿಗಿನ ಜೂಜು ಅಂತ ಹೇಳಿ ನಗರಕ್ಕೆ ಮುಖ ಮಾಡಿ ಕೈಗಾರಿಕೆ, ಉದ್ಯಮ, ಕಚೇರಿಗಳಲ್ಲೆಲ್ಲ ಇಳಿದೆವು. ಕೊನೆಗೆ ನಗರ ಹತ್ತಿಸಿದ ಸಂಪತ್ತಿನ ದಾಹದೊಳಗೆ ಗದ್ದೆ-ತೋಟಗಳನ್ನು ನೆಲಸಮ ಮಾಡುತ್ತ ವಾಸದ ಬಡಾವಣೆ ನಿರ್ಮಾಣಕ್ಕೆ ತೊಡಗಿದೆವು.
ಕಾಡಿನಿಂದ ಗದ್ದೆ, ಗದ್ದೆಯಿಂದ ತೋಟ, ತೋಟದಿಂದ ಉದ್ಯಮದ ಪ್ರತಿ ವಲಸೆಯಲ್ಲೂ ನಾವು ಅತ್ತಿದ್ದೇ, “ಹಿಂದಿನಂತೆ ಈಗಿಲ್ಲ, ಎಲ್ಲ ಹಾಳಾಗುತ್ತಿದೆ” ಎಂದು. ಈಗ ಕಾಡು ಹೋಗಿ ಕಾಂಕ್ರೀಟ್ ಕಾಡು ಬಂತೆಂದು ಮರುಗುತ್ತಿರುವ ನಾವು, ಮುಂದೊಂದು ದಿನ ಕಾಂಕ್ರೀಟ್ ಕಾಡು ಹೋಗಿ ಇನ್ನೋನೋ ಬಂತೆಂದೂ ಕರುಬಬಹುದೇನೋ!
ಈ ಎಲ್ಲ ಹಳಹಳಿಕೆಗಳ ಮಧ್ಯದಲ್ಲಿ ಇಂದಿನ ಮಕ್ಕಳ ಪರಿಸ್ಥಿತಿ ನೋಡಿದರೆ ನಿಜಕ್ಕೂ ಅಯ್ಯೋ ಅನಿಸುತ್ತದೆ:
- ಬೆಳಕು ಹರಿಯುವ ಮೊದಲೇ ಶಾಲೆಗೆ ಓಡಬೇಕು, ಡಬ್ಬದ ಊಟ-ತಿಂಡಿಗೆ ಹೊಂದಿಕೊಳ್ಳಬೇಕು, ಗುಂಪಿನಲ್ಲಿ ಗೋವಿಂದ ಎಂದು ಓದಬೇಕು, ಎಲ್ಲರೂ 100ಕ್ಕೆ 100 ಅಂಕ ತೆಗೆಯುವಂತಾಗಬೇಕು, ಮುಂದೆ ಒಳ್ಳೆಯ ಕೋರ್ಸ್-ಕೆಲಸಕ್ಕೆಲ್ಲ ಸೇರಿಕೊಳ್ಳಬೇಕು (ಅದು ಹೇಗೆ ಸಿಗತ್ತೆ ಅಂತ ಗೊತ್ತಿಲ್ಲದಿದ್ದರೂ) ಎಂಬ ರ್ಯಾಟ್ ರೇಸ್‍ಗೆ ಅಂಬೆಗಾಲಿಂದ ಮೇಲೆದ್ದು ತೊದಲಾಡುತ್ತಿರುವ 2-3 ವರ್ಷಕ್ಕೇ ಬಿದ್ದು, ಉಂಡು-ಆಡೋ ವಯಸ್ಸಿನಲ್ಲಿ ಓದಿ ಮಣ್ಣು ಹುಯಿದುಕೊಂಡರು ಎಂದು ಪರಿತಪಿಸುತ್ತಾ…
- ಶಾಲೆ ಮುಗಿಸಿ ಮನೆಗೆ ಬಂದರೆ ಅರ್ಜೆಂಟಿಗೆ ಅಂತ ಏನೋ ಒಂದಷ್ಟು ಜಂಕ್ ತಿಂದು, ಮೈದಾನ ಬಿಡಿ, ಮನೆಗೆ ತಾಕಿಕೊಂಡ ರಸ್ತೆಯಲ್ಲೂ ನಿರಾತಂಕವಾಗಿ ಆಟವಾಡಲು ಸಾಧ್ಯವಾಗದೇ, ಮನೆಮಂದಿಯಿಂದೆಲ್ಲ ಬೈಸಿಕೊಳ್ಳುತ್ತ ಮೊಬೈಲ್-ಟಿವಿಯಲ್ಲೇ ಮುಳುಗಿ, ಮನೆಯಲ್ಲಿ ಹೀಗೇ ಆದರೆ ಓದಿದಂತೆಯೇ ಎಂದು LKG, UKGಯಿಂದಲೇ ಟ್ಯೂಷನ್‍ಗೆ ಅಟ್ಟಿಬಿಡುತ್ತೇವೆ.
- ಆಗೊಮ್ಮೆ , ಈಗೊಮ್ಮೆ ಅಲ್ಲಿ-ಇಲ್ಲಿ ಓಡಾಡಿಸಿ, ಸಿಕ್ಕಸಿಕ್ಕಿದ್ದನ್ನೆಲ್ಲ ಕೊಡಿಸಿಕೊಂಡು ಹಾಳು-ಮೂಳನ್ನೆಲ್ಲ ಸಮಾ ತಿನ್ನಿಸಿ, ದಿನಾ ಹೀಗೆ ಆಗದು ಎಂಬ ಕಿವಿಮಾತನ್ನೂ ಹೇಳುತ್ತ ಕುಲೋದ್ಧಾರದ ಚರಮ ತಲುಪಿದಂತೆ ಆಡುತ್ತೇವೆ.
- ಇನ್ನು ರಜೆ ಬಂತೆಂದರೆ ಮಕ್ಕಳು, ಅಲ್ಲ-ಅಲ್ಲ ಮಗುವೆಂದರೆ (ಹೆಚ್ಚಾಗಿ ಒಂದೇ ಇರುತ್ತದಲ್ಲ) ಮನೆಯವರಿಗೆಲ್ಲ ಕಿರಿಕಿರಿ. ಬೇಸಿಗೆ ರಜೆಯಾದರೆ ಶಿಬಿರಗಳಿಗೆ ಸಾಗ ಹಾಕಬಹುದು. ಒಂದೆರಡು ದಿನ, ವಾರದ ರಜೆಗಳಿಗೆಲ್ಲ ಅವರನ್ನು ಏನು ಮಾಡುವುದು ಎನ್ನುವುದೇ ದೊಡ್ಡ ಚಿಂತೆ.
ಸ್ವಯಂಕೃತಾಪರಾಧವೋ, ಅನಿವಾರ್ಯತೆಯೋ, ಇದು ಹೀಗೇ ಎಂದು ಹೇಳಲು ಕಷ್ಟವಾದರೂ, ಕಷ್ಟವನ್ನು ಅನುಭವಿಸುತ್ತಿರುವುದಂತೂ ಸತ್ಯ.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #LostChildhood #ConcreteJungle #ModernParenting #TheRatRace #HumanEvolution #SocialReflection







