• May 18, 2026
  • RP
  • 0

What will become of the children who neither expose themselves to the heat of the playground nor find peace in the shade of their homes? Only God knows.

There is a deep sense of anguish in the thought that, while animals are no longer to be found in this land, we ourselves are living like animals—immersed in nothing but food, sleep, fear and sexual desire.

— Shri Bharateesha P., Convenor, Rashtrotthana Media Centre

Somehow, creation came into being. We lived in the forests. Like animals, we ate whatever we could find. We did not bother to gather and store something away for the future. We trusted nature, and we lived.

ಅತ್ತ ಮೈದಾನದ ಬಿಸಿಲಿಗೂ ಮೈ ಒಡ್ಡದ, ಇತ್ತ ಮನೆಯ ನೆರಳಿನಲ್ಲೂ ನೆಮ್ಮದಿ ಕಾಣದ ಮಕ್ಕಳ ಪರಿಸ್ಥಿತಿ ಏನಾಗುವುದೋ? ಆ ದೇವರೇ ಬಲ್ಲ.

ಹುಟ್ಟಿನೊಂದಿಗೆ ಜೀವ ಹುಟ್ಟುವುದೂ ಇಲ್ಲ, ಸಾವಿನೊಂದಿಗೆ ಸಾಯುವುದೂ ಇಲ್ಲ ಎಂಬ ದರ್ಶನ ದಕ್ಕಿದ ಭರತಭೂಮಿಯಲ್ಲಿ, ರಕ್ತ-ಅಂಗಾಂಗ ದಾನಗಳು ಜೀವದ ಅನಂತಯಾತ್ರೆಯಲ್ಲಿ ಸೂಕ್ಷ್ಮವಿಚಾರಗಳಾಗಿವೆ. ಜೀವದ ಒಟ್ಟಾರೆ ಕಾಳಜಿ ಹಾಗೂ ಮಾನವೀಯ ಕಳಕಳಿಗಳ ತಾಕಲಾಟದಲ್ಲಿ, ಕೊನೆಗೆ ಮಾನವೀಯತೆಯೇ ಗೆಲ್ಲುವ ಒಂದು ನೈಜ ಘಟನೆಯಿದು…

ಶ್ರೀ ಭಾರತೀಶ ಪಿ, ಸಂಚಾಲಕ, ರಾಷ್ಟ್ರೋತ್ಥಾನ ಮಾಧ್ಯಮ ಕೇಂದ್ರ

ಪಕ್ಕದ ಮನೆ ಅಜ್ಜಿಯ ಸರ್ಜರಿಗೆ B+ve ರಕ್ತದ ತುರ್ತು ಇತ್ತು. ಅದ್ಹೇಗೋ ಇವರದ್ದೂ ಅದೇ ರಕ್ತದ ಗುಂಪೆಂದು ತಿಳಿದು ಅಜ್ಜಿಯ ಮನೆಯವರಿಂದ ಕರೆ ಬಂದಾಗ, ಇವರ ಮನೆಯಾಕೆ “ಇವರಿಗೆ ಶುಗರ್ ಇದೆ” ಎಂದು ಹೇಳಿ ಪ್ರಸ್ತಾವವನ್ನು ನಿರಾಕರಿಸಿದ್ದಳು. ಅಷ್ಟೇ ಅಲ್ಲದೇ, ಓಡೋಡಿ ಬಂದು “ನಿಮ್ಮ ಬ್ಲಡ್ ಗ್ರೂಪ್ ಇವರಿಗೆ ಗೊತ್ತಾಗಿದ್ದು ಹೇಗೆ?” ಎಂದು ಆಶ್ಚರ್ಯದಿಂದ ಪ್ರಶ್ನಿಸುತ್ತಿದ್ದಳು.

ಆಗ ಇವರು, “ಶುಗರ್‌ ಇದ್ದರೆ ರಕ್ತ ಕೊಡಬಾರದು ಅಂತೇನೂ ಇಲ್ಲ, ಕೊಟ್ಟರೆ ಒಂದಷ್ಟು ಶುಗರ್‌ ಕಡಿಮೆಯೇ ಆಗುತ್ತದೆ” ಎಂದು ಉಸುರುತ್ತಲೇ ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತಕೇಂದ್ರಕ್ಕೆ ಕರೆ ಮಾಡಿದರು. ಅಲ್ಲಿಂದ “ಯಾವ ಕಾಂಪೊನೆಂಟ್ ಬೇಕು?” ಎಂಬ ತಾಂತ್ರಿಕ ಪ್ರಶ್ನೆ ಎದುರಾಯಿತು. ಆದರೆ ಅಜ್ಜಿಯ ಮನೆಯವರಿಗೆ ಇದರ ಕಲ್ಪನೆಯೇ ಇರಲಿಲ್ಲ.

ಅಜ್ಜಿಯ ಮನೆಯವರು 7-8 ಕಡೆ ಹುಡುಕಾಡಿಯೂ ರಕ್ತ ಸಿಗದೇ, ಕೊನೆಗೆ “ಎಕ್ಸ್ಚೇಂಜ್ ಕೊಟ್ಟು ರಕ್ತ ತರಲು ಸಿದ್ಧರಾಗಿದ್ದೇವೆ, ಜೊತೆಗೆ ಇನ್ನೊಬ್ಬರ ಹುಡುಕಾಟದಲ್ಲಿದ್ದೇವೆ” ಎಂದು ಅಜ್ಜಿಯ ಸೊಸೆ ಹತಾಶೆಯಿಂದ ಹೇಳಿದಾಗಲೂ ಇವರ ಮನಸ್ಸು ತಕ್ಷಣಕ್ಕೆ ಕರಗಿರಲಿಲ್ಲ.

ಆದರೆ ಫೋನಿಟ್ಟು ನಾಲ್ಕು ಕ್ಷಣ ಯೋಚಿಸಿದಾಗ ಇವರು ಕಂಪಿಸಿದರು. ವೈಯಕ್ತಿಕ ಸಿದ್ಧಾಂತ ಏನೇ ಇರಲಿ, ಕಣ್ಣೆದುರೇ ನೆರೆಮನೆಯವರು ಕಷ್ಟಪಡುತ್ತಿರುವಾಗ ಸ್ಪಂದಿಸುವುದೇ ಪ್ರಾಥಮಿಕ ಧರ್ಮ ಎಂಬ ತೀರ್ಮಾನಕ್ಕೆ ಬಂದರು. ಮುಂದಿನ ಐದೇ ನಿಮಿಷದಲ್ಲಿ ಅಜ್ಜಿಯ ಸೊಸೆಗೆ ಕರೆ ಮಾಡಿ ತಾವೇ ಬರುವುದಾಗಿ ತಿಳಿಸಿದರೆ, ಅತ್ತಕಡೆಯಿಂದ “ಸದ್ಯಕ್ಕೆ ಬೇರೆ ವ್ಯವಸ್ಥೆ ಆಗಿದೆ, ಹೆಚ್ಚೇನಾದರೂ ಬೇಕಿದ್ದರೆ ತಿಳಿಸುತ್ತೇವೆ” ಎಂಬ ಉತ್ತರ ಬಂತು.

ರಕ್ತ ಕೊಡುವ ಅವಕಾಶ ಕೈತಪ್ಪಿರಬಹುದು, ಆದರೆ “ಧರ್ಮಕ್ಕೆ ಅಪಚಾರವಾಗದಂತೆ ನಡೆಸು ದೇವಾ” ಎಂಬ ಪ್ರಾರ್ಥನೆಗಳೊಂದಿಗೆ, ಮುಂದಿನ ಕ್ಷಣಗಳಲ್ಲಿ ಮತ್ತೆ ಅನಿವಾರ್ಯದ ಕರೆ ಬಂದರೆ ಸಹರ್ಷವಾಗಿ ರಕ್ತ ನೀಡಲು ಇವರು ಸನ್ನದ್ಧರಾಗಿ ನಿಂತಿದ್ದರು.

 

Learn More: http://bloodcentre.rashtrotthana.org/
#Rashtrotthana #RashtrotthanaParishat #rashtrotthanainrashtraseva #RashtrotthanaBloodCentre #BloodDonation #BloodDonationCamp #BloodDonors #KannadaWriters #HumanityFirst #BloodDonationSavesLives #RealLifeStories #Compassion #NammaBengaluru

Leave a Reply

Your email address will not be published. Required fields are marked *