This Is What Began Happening When Squatting and Sitting Cross-Legged Were Left Behind…

In those days, when the feeling that “food is Brahman” still held some strength, cooking was done squatting on one’s haunches, and meals were eaten sitting cross-legged in silence, without any distractions from screens or other mischief. When even one’s bodily functions were also attended to squatting on one’s haunches, a healthy, unburdened ease pervaded the entire body and mind.
But when food descended from the feeling of divinity to mere sensory pleasure, cooking done squatting on the haunches rose up onto gas stoves and cookers, no longer bending low. Standing continuously to cook drew the cold touch of granite into the body. Meals eaten sitting cross-legged shrank away into a corner, and dining-table meals — which began as a display of one’s status and strength — started, breaking their silence, admitting that the legs no longer had the strength for it. Fixing one’s attention inside the “fool-box” (television) and carrying on, the weakened legs, longing for the comfort of support, gave up squatting altogether and switched over to chair-mode.
ಕುಕ್ಕರಿಸುವುದು, ಚಕ್ಕಮಕ್ಕಳಾಗುವುದೆಲ್ಲ ಬಿಟ್ಟು ಹೋದಾಗ ಹೀಗಾಗಲು ತೊಡಗಿತು…
ಅನ್ನವು ಬ್ರಹ್ಮವೆಂಬ ಭಾವಕ್ಕೆ ಒಂದಷ್ಟು ಬಲವಿದ್ದ ಆ ಕಾಲದಲ್ಲಿ ಕುಕ್ಕುರುಗಾಲಿನಲ್ಲಿ ಅಡುಗೆ, ಚಕ್ಕಳಮಕ್ಕಳದಲ್ಲಿ ನಿಶ್ಶಬ್ದವಾಗಿ ಯಾವುದೇ ದೃಶ್ಯದರ್ಶನ ಚೇಷ್ಟೆಗಳಿಲ್ಲದೇ ಊಟವಾಗಿ, ಮತ್ತೆ ಬಹಿರ್ದೆಸೆ ಕುಕ್ಕುರುಗಾಲಿನಲ್ಲೇ ಆದಾಗ ಆರೋಗ್ಯಮಯ ನಿರಾಳ ಮೈಮನಗಳ ತುಂಬೆಲ್ಲ ವ್ಯಾಪಿಸುತ್ತಿತ್ತು.
ಅನ್ನವು ಬ್ರಹ್ಮಭಾವದಿಂದ ಸುಖಾನುಭೂತಿಗೆ ಇಳಿದಾಗ, ಕುಕ್ಕುರುಗಾಲಿನ ಅಡಿಗೆ ಗ್ಯಾಸ್-ಕುಕ್ಕರ್-ಗಳ ಮೇಲೇರಿ ತಗ್ಗಿ-ಬಗ್ಗದೆಯೇ ಅನ್ನವಾಗತೊಡಗಿತು, ಅಡುಗೆಗಾಗಿ ನಿಂತುನಿಂತೇ ಗ್ರಾನೈಟ್ ಥಂಡಿ ಮೈಗೆಳೆಯಿತು, ಚಕ್ಕಳಮಕ್ಕಳದ ಊಟ ಮುದುರಿ ಮೂಲೆಗೆ ಸರಿದು, ಬಲಾಬಲ ತೋರಿಕೆಯಾಗಿ ಶುರುವಾದ ಡೈನಿಂಗ್ ಊಟ ಕಾಲಲ್ಲಿ ಬಲವಿಲ್ಲವೆಂದು ಮೌನ ಮುರಿಯುತ್ತಾ ಮೂರ್ಖಪೆಟ್ಟಿಗೆಯೊಳಗೆ ಚಿತ್ತವನ್ನು ನೆಟ್ಟಿಸಿಕೊಂಡು ಮುಂದುವರೆದು, ನಿಶ್ಶಕ್ತ ಕಾಲುಗಳು ಆಸರೆಯ ಅಕ್ಕರೆಗಾಗಿ ಕುಕ್ಕರಿಸುವುದನ್ನು ಬಿಡುತ್ತಾ ಕ-modeಗೆ ಬದಲಾಯಿಸಿಕೊಂಡವು.
ಈಗ ಇಟಾಲಿಯನ್ ಕಿಚನ್ ಮಾಡಿಕೊಂಡರೂ ಸೌತ್ ಕಿಚನ್ನಿಂದ ತರಿಸಿ ತಿನ್ನುವ ಮನಸ್ಸೇ ಎಷ್ಟೊತ್ತಿಗೂ. ಚಕ್ಕಳಮಕ್ಕಳ ಬಿಡಿ, ಟೇಬಲ್ ಕೂಡ ಬಲ ಕಳೆದುಕೊಳ್ಳುತ್ತಿದೆ. ಕಾಲುಗಳೇ ಕಂಬಗಳೆಂದು ಕೆಲವೊಮ್ಮೆ ನಿಂತಲ್ಲೇ, ಮತ್ತೆ ಕೆಲವೊಮ್ಮೆ ಅಲ್ಲಲ್ಲಿ ನಿಂತು, ಮೊಬೈಲ್ನೊಳಗೆ ಮನವ ಹೊಕ್ಕಿಸಿ, ಏನೋ ಒಂದಷ್ಟನ್ನು ದೇಹದೊಳಕ್ಕೆ ದೂಡಿ, ದೂಡಿದ್ದು ಸಲೀಸಾಗಿ ಒಳಹೋಗಲೆಂದು ಮತ್ತೇನೋ ಒಂದಷ್ಟನ್ನು ಕುಡಿಸಿ, ಸಲೀಸಾಗಿ ಆಗದ ಬಹಿರ್ದಶಾ ಕಾಲದೊಳಗೊಂದು ವ್ಯವಧಾನದ ಆಚ್ಛಾದನದೊಳಗೆ ಅಧ್ಯಯನ ಕಾಲಕ್ಷೇಪಕ್ಕೂ ತೊಡಗಿದ್ದೇವೆ.
#Rashtrotthana #RashtrotthanaParishat #rashtrotthanainrashtraseva #mealonfloor #bhojanaprasada #indiankitchen







