For matters that stir up mixed feelings, balancing and delivering “well done” and “not-so-well-done” reactions together is quite a challenge indeed.
The son of a friend of mine calls his father from the school van driver’s mobile phone. At that moment, the father is deep in a meeting. When the call comes two or three times without stopping, he answers, thinking, “What could have happened!” From the other end, the son asks in his usual tone, “Appa! Should I go to play on the cycle?” The father says, “Cycle is absolutely not possible. You must walk,” and as he goes back to continuing the meeting, two different trains of thought start coiling around one another. Sometimes such mixed and conflicting feelings are only natural.
ಮಿಶ್ರಭಾವಜನಕ ವ್ಯವಹಾರಗಳಿಗೆ ಭೇಷ್, ಭೇಷ್-ಲೆಸ್ ಪ್ರತಿಕ್ರಿಯೆಗಳನ್ನು ಸರಿದೂಗಿಸಿ, ಒಟ್ಟೊಟ್ಟಿಗೆ ಕೊಡುವುದೂ ದೊಡ್ಡ ಸವಾಲೇ ಸರಿ

4ನೇತಿಯ ಮಗ ಸ್ಕೂಲ್ ವ್ಯಾನ್ ಡ್ರೈವರ್ ಮೊಬೈಲ್‍ನಿಂದ ಅಪ್ಪನಿಗೆ ಕರೆ ಮಾಡುತ್ತಾನೆ. ಆಗ ಅಪ್ಪ ಮೀಟಿಂಗ್ ಒಂದರಲ್ಲಿ ಮುಳುಗಿರುತ್ತಾನೆ. ಎರಡು-ಮೂರು ಬಾರಿ ಬಿಟ್ಟೂಬಿಡದೇ ಕರೆ ಬಂದಾಗ ಏನಾಯಿತೋ! ಎಂದು ಕರೆ ಸ್ವೀಕರಿಸಿದರೆ, ಅತ್ತಲಿಂದ ಮಗ ಎಂದಿನ ರಾಗದಲ್ಲಿ “ಅಪ್ಪಾ! ಆಟಕ್ಕೆ ಸೈಕಲ್‍ನಲ್ಲಿ ಹೋಗೋದಾ?” ಅಂತ ಕೇಳುತ್ತಾನೆ. ಅಪ್ಪ “ಸೈಕಲ್ ಬಿಲ್ಕುಲ್ ಸಾಧ್ಯವಿಲ್ಲ. ನಡೆದೇ ಹೋಗಬೇಕು” ಎಂದು ಹೇಳುತ್ತಾ ಮೀಟಿಂಗಿನಲ್ಲಿ ಮತ್ತೆ ಮುಂದುವರೆಯುತ್ತಿದ್ದಾಗ ಎರಡೆರಡು ಚಿಂತನೆಗಳು ಒಂದರೊಳಗೊಂದು ಸುರುಳಿಸುತ್ತಿಕೊಂಡು ಬರಲಾರಂಭಿಸುತ್ತವೆ. ಕೆಲವೊಮ್ಮೆ ಭಾವಗಳಲ್ಲಿ ಮಿಶ್ರ-ದ್ವಂದ್ವಗಳೆಲ್ಲ ಸಹಜವಾಗೇ ಇರುತ್ತವೆ. ಅದದನ್ನು ಹಾಗ್ಹಾಗೇ ಎದುರಿಸಬೇಕು ಮತ್ತು ವ್ಯಕ್ತಪಡಿಸಬೇಕೆಂಬ ಗುಂಗಿನಲ್ಲೇ ಮನೆಗೆ ಮರಳಿದ ಅಪ್ಪ ಮಗನಿಗೆ “ವ್ಯಾನ್ ಡ್ರೈವರ್ ಮೊಬೈಲ್‍ನಿಂದ ಕಾಲ್ ಮಾಡಿದ ಧೈರ್ಯಕ್ಕೆ ಭೇಷ್ ಮತ್ತು ಸೈಕಲ್-ನಲ್ಲಿ ಆಟಕ್ಕೆ ಹೋಗುವ ಹಳೇ ರಾಗವನ್ನೇ ಮತ್ತೇನೋ ಭಾರಿ ಎನ್ನುವಂತೆ ಅತಿ ಮಾಡಿದ್ದಕ್ಕೆ ಭೇಷ್-ಲೆಸ್” ಎಂದು ಹೇಳಿ ನಿರಾಳವಾಗುತ್ತಾನೆ.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #mixedemotions #bhesh #bheshless







