• June 20, 2026
  • RP
  • 0

For matters that stir up mixed feelings, balancing and delivering “well done” and “not-so-well-done” reactions together is quite a challenge indeed.

The son of a friend of mine calls his father from the school van driver’s mobile phone. At that moment, the father is deep in a meeting. When the call comes two or three times without stopping, he answers, thinking, “What could have happened!” From the other end, the son asks in his usual tone, “Appa! Should I go to play on the cycle?” The father says, “Cycle is absolutely not possible. You must walk,” and as he goes back to continuing the meeting, two different trains of thought start coiling around one another. Sometimes such mixed and conflicting feelings are only natural.


ವೃದ್ಧಾಪ್ಯ ಧುತ್ತನೆಂದು ಸುಮಂಗಲಗೊಂಡು ಸುಂದರವಾಗುವುದಿಲ್ಲವಲ್ಲ…

ಸುಕೋಮಲ ಜನ್ಮ, ಕಾಳಜಿಪೂರಿತ ಬಾಲ್ಯ, ಸ್ವಚ್ಛಂದ ಶೈಶವ, ಸುಂದರ ಕೌಮಾರ, ಸ್ವತಂತ್ರ ಯೌವ್ವನ, ಜವಾಬ್ದಾರಿಯುತ ಗೃಹಕೃತ್ಯ, ಸನಾತನ ಸಂತಾನ, ಕಡಿಮೆ ಅಂಟಿನ ರುಚಿ-ಸೌಂದರ್ಯ-ಸುಖಗಳ ನಿವೃತ್ತಿ, ತ್ಯಾಗ ಪ್ರವೃತ್ತಿ, ಎಲ್ಲ ಬೇಕಲ್ಲ…

ನಿರಂತರ ಧಾವಾಧಾವಿಯ ಬದುಕಿನಲ್ಲಿ ಆರೋಗ್ಯಪೂರ್ಣ ವೃದ್ಧಾಪ್ಯ ಬಿಡಿ, ಯೌವ್ವನ, ಕೌಮಾರ, ಬಾಲ್ಯಗಳೂ ಮರೀಚಿಕೆಯೇನೋ ಎಂದು ಒಮ್ಮೊಮ್ಮೆ ಅನಿಸುತ್ತದೆ. ಆದರೆ ವಯೋಸಹಜವಾಗಿ ವೃದ್ಧರಾಗುತ್ತ-ಆಗುತ್ತ ಮೈ-ಮನಗಳಲ್ಲಿ ಕಳೆ ತುಂಬಿಕೊಂಡು, ತರುಣರನ್ನೂ ನಾಚಿಸುವಂತೆ ಸಕ್ರಿಯರಾಗಿದ್ದುಕೊಂಡು, ಬುದ್ಧಿ-ಭಾವಗಳಲ್ಲಿ ಪಕ್ವಗೊಳ್ಳುತ್ತಾ ಸಾಗುವವರನ್ನು ಕಂಡಾಗ, ಮುದಿ ಎಂಬುದು ಜಾಡ್ಯವಾಗಿ ಬಾಧಿಸದೇ ಮುದ ಕೊಡುವ ಖನಿಯಾಗಿ ತೋರುತ್ತದೆ.

ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ…

ಅನಂತ ಸಂಸಾರದಲ್ಲಿ ಹುಟ್ಟು-ಸಾವುಗಳ ಚಕ್ರ ನಿತ್ಯನಿರಂತರವೆಂದು ಹೇಳುವ ಭಾರತೀಯ ಚಿಂತನೆಯು, ಪೂರ್ವಜನ್ಮದ ಸಂಚಿತ ಕರ್ಮಗಳು, ಈ ಜನ್ಮದಲ್ಲಿ ಘಟಿಸುವ ವಾಸನಾ ಕರ್ಮಗಳು, ಮುಂದಿನ ಜನ್ಮಕ್ಕೆ ಕಟ್ಟಿಕೊಳ್ಳುವ ಕರ್ಮದ ಬುತ್ತಿಯ ಮೇಲೂ ಬೆಳಕು ಚೆಲ್ಲುತ್ತಾ, ಬೆತ್ತಲಾಗಿ ಧರೆಗಿಳಿದ ಈ ಶರೀರ  ಹೋಗುವಾಗಲೂ ಬೆತ್ತಲಾಗಿ, ಮಲಮೂತ್ರಾದಿಗಳ ಗಂಧವೂ ಇಲ್ಲದಂತೆ ಪರಮಪವಿತ್ರವಾದ ಯಜ್ಞದ ಸಮಿತ್ತಿನಂತೆ ಪಂಚಭೂತಗಳಲ್ಲಿ ಲೀನವಾಗಬೇಕು ಎಂದು ಹೇಳುತ್ತದೆ.

ಹಾಗಿರುವಾಗ ವೃದ್ಧಾಪ್ಯ ಆರೋಗ್ಯಪೂರ್ಣ ಮಾತ್ರವಲ್ಲ, ಪ್ರಸನ್ನವಾಗಿಯೂ ಇರಬೇಕಾಗುತ್ತದೆ. ಅಂಥ ಮಾಗುವಿಕೆ ಬಂದಾಗಲೇ ಅಲ್ಲವೇ ಜ್ಞಾನವೃದ್ಧರಷ್ಟೇ ವಯೋವೃದ್ಧರ ಸನ್ನಿಧಿಗಳಿಗೂ ಬಾಗಿ ನಮಸ್ಕಾರಗಳು ಏರ್ಪಡುವುದು.

ಕಾಲ ಸರಿದಂತೆ ಹಳತಾಗುತ್ತದೆ ಎಂಬುದು ಒಂದು ನಂಬಿಕೆಯಾದರೆ, ವರ್ಷ-ವರ್ಷದ ಬೆಳವಣಿಗೆಯಲ್ಲೂ ಜೀವ ಮತ್ತಷ್ಟು ಮಾಗಿ, ಕಳೆತು ಹಣ್ಣಾಗಿ, ಮುಪ್ಪಡರಿದರೂ ಕಾಂತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತದೆ.

ವೃದ್ಧಾಪ್ಯ ಧುತ್ತನೆಂದು ಸುಮಂಗಲಗೊಂಡು ಸುಂದರವಾಗುವುದಿಲ್ಲವಲ್ಲ. ಅದಕ್ಕೆ ಬೇಕೇಬೇಕು ಸುಕೋಮಲ ಜನ್ಮ, ಕಾಳಜಿಪೂರಿತ ಬಾಲ್ಯ, ಸ್ವಚ್ಛಂದ ಶೈಶವ, ಸುಂದರ ಕೌಮಾರ, ಸ್ವತಂತ್ರ ಯೌವ್ವನ, ಜವಾಬ್ದಾರಿಯುತ ಗೃಹಕೃತ್ಯ, ಸನಾತನ ಸಂತಾನ, ಕಡಿಮೆ ಅಂಟಿನ ರುಚಿ-ಸೌಂದರ್ಯ-ಸುಖಗಳ ನಿವೃತ್ತಿ, ತ್ಯಾಗ ಪ್ರವೃತ್ತಿ. ಕಾಲ-ದೇಶಗಳ ಕಾರಣದಿಂದ ಬಹಿರಂಗದಲ್ಲಿ ಒಂದಷ್ಟು ಸಾಧ್ಯವಾಗಬಹುದು, ಒಂದಷ್ಟು ಸಾಧ್ಯವಾಗದೇ ಇರಬಹುದು. ಇಲ್ಲೂ ನಿರಾಶರಾಗುವ ಅಗತ್ಯವಿಲ್ಲ. ಬಹಿರಂಗಕ್ಕೆ ಹೋಲಿಸಿದರೆ ಅಂತರಂಗದ ಉನ್ನತಿಯ ಸ್ವಾತಂತ್ರ್ಯ ಯಥೇಚ್ಛವಾಗಿದೆ. ಕೊನೆಗೂ ಆಗಬೇಕಿರುವುದೇನು! ಅಂತರಂಗದ ಉಚ್ಛ್ರಾಯವೇ ಅಲ್ಲವೇ!

ಒಬ್ಬ ಸಾಮಾನ್ಯ ಮನುಷ್ಯನ ಮಟ್ಟದಲ್ಲಿ ಯೋಚನೆ ಮಾಡುವುದಾದರೆ, ಬೆಳಗಿನ ಉತ್ಥಾನ ಪ್ರಸನ್ನವಾಗಿರಲಿ; ಈ ದಿನದ ಬದುಕು, ನಿನ್ನೆಯ ಪಾಪದ ಪ್ರಾಯಶ್ಚಿತ್ತದಿಂದ ನಲುಗದೇ, ಭವ್ಯಭವಿತವ್ಯದ ಆಶಾಗೋಪುರದೊಳಗೆ ಸಿಲುಕಿ ಹಪಹಪಿಸದೇ, ವ್ಯವಧಾನದ ಸಮಾಧಾನ ಚಿತ್ತದಲ್ಲಿ ನೂರಕ್ಕೆ ನೂರು ತೊಡಗಿಕೊಳ್ಳಲಿ; ಸಂಜೆಯಾಗುವಷ್ಟರ ಹೊತ್ತಿಗೆ ಧನ್ಯ-ಕಾರುಣ್ಯ-ಭಕ್ತಿಗಳೊಂದಿಗೆ ಬಾಗಿ; ರಾತ್ರಿಯಲಿ ದಿಂಬಿಗದು ತಲೆ ತಾಕುತ್ತಿದ್ದಂತೆಯೇ ಆಯಾಸ-ಪರಿಹಾರ-ವಿಶ್ರಾಂತಿಯ ನಿದ್ದೆಯೊಳಗೆ ಮುಳುಗೇಳಲಿ.

ಹೀಗಾಗುತ್ತಲಿದ್ದರೆ ಕೇವಲ ವೃದ್ಧಾಪ್ಯ ಆರೋಗ್ಯಪೂರ್ಣವಾಗುವುದೇನು ಬಂತು, ಅನಂತ ಸಂಸಾರ ಸಾಗರದೊಳಗೆ ವಿಹರಿಸುತ್ತಲೇ ಮೋಕ್ಷದ ಸುಖವನ್ನೂ ಸುಖಿಸಬಹುದೇನೋ!

 

Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #yoga #IDY #IDY2026 #InternationalDayofYoga #yogaforhealthyageing #healthyageing

Leave a Reply

Your email address will not be published. Required fields are marked *