• July 22, 2026
  • RP
  • 0

“Deepo haratu me paapam deepajyotirnamo’stu te…” — Whatever You Say Today, It’s Yes Yes Yes…

(The chant means: “The lamp removes my sins, salutations to you, O light of the lamp…”)

His name is Bhaswan M.B. — “M.B.” is only in name, but when it comes to mischief, pranks, and crying, he’s truly a “GB” (Giga Byte)! Today is his birthday. The excitement was bubbling up from within him. This boy, who normally wouldn’t budge even if you called him seven times every morning, was up and sitting bright and early at six. His eagerness to celebrate every little thing was plain to see.

ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋऽಸ್ತು ತೇ… ಏನ್ ಹೇಳಿದ್ರೂ ಯೆಎಸ್ ಯೆಎಸ್ ಯೆಎಸ್…

ಅವನು ಭಾಸ್ವಾನ್ ಎಂ ಬಿ. ಹೆಸರಿನಲ್ಲಷ್ಟೇ ಎಂ ಬಿ, ತಂಟೆ-ತರ್ಲೆ-ಅಳುವಿನಲ್ಲಿ ಜಿಬಿಯೇ (Giga Byte) ಸರಿ. ಅವನು ಹುಟ್ಟಿದ ದಿನವಿದು. ಸಂಭ್ರಮ ಒಳಗಿನಿಂದಲೇ ಪುಟಿದೇಳುತ್ತಿತ್ತು. ಪ್ರತಿನಿತ್ಯ ಬೆಳಗ್ಗೆ ಏಳಾದರೂ ಜಪ್ಪಯ್ಯ ಅನ್ನದೇ ಬಿದ್ದುಕೊಂಡಿರುತ್ತಿದ್ದ ಅವನು ಬೆಳ್ಳಂಬೆಳಗ್ಗೆ ಆರಕ್ಕೇ ಎದ್ದುಕೂತಿದ್ದ. ಒಂದೊಂದನ್ನೂ ಸಂಭ್ರಮಿಸುವ ತಹತಹ ಎದ್ದು ಕಾಣುತ್ತಿತ್ತು. ಅದಕ್ಕೆ ಸರಿಯಾಗಿ ಅವನಪ್ಪ ಕಾಲು ತೊಳೆದುಕೋ, ಹಲ್ಲುಜ್ಜು, ಎಣ್ಣೆ ಹಚ್ಚಿಸಿಕೋ, ನೀರು ಕುಡಿ, ಎರಡು ಸುತ್ತು ಸೈಕಲ್ ಹೊಡಿ, ಶಿಸ್ತಾಗಿ ತಲೆ ಸ್ನಾನ ಮಾಡಿಕೋ, ಶ್ರದ್ಧೆಯಿಂದ ಸಂಧ್ಯಾವಂದನೆ ಮಾಡು, ಇಪ್ಪತ್ತೆಂಟಲ್ಲ ನೂರೆಂಟು ಗಾಯತ್ರೀ ಜಪ ಮಾಡು, ಹೊಸ ಬಟ್ಟೆಯನ್ನು ಟ್ಯಾಗ್ ತೆಗೆದು ಹಾಕಿಕೋ, ಪ್ಯಾಂಟ್ ಸ್ವಲ್ಪ ಉದ್ದವಿದ್ದರೆ ಪರವಾಗಿಲ್ಲ – ಮಡಸಿಕೋ, ಮನೆಯ ಹಿರಿಯರಿಗಿಷ್ಟು – ಸ್ವಂತ ಸೇವನೆಗಷ್ಟು – ಶಾಲೆಗಿಷ್ಟು – ವ್ಯಾನಿಗಿಷ್ಟು – ಶಟಲ್ ಪರಿವಾರಕ್ಕೆ ಮತ್ತೊಂದಷ್ಟು – ಬೀದಿಯ ಆಟದ ಸಾಥಿಗಳಿಗಿಷ್ಟು – ಅಪ್ಪ ಅಮ್ಮನ ಆಫೀಸ್ ಪರಿವಾರದವರಿಗಷ್ಟು ಎಂದೆಲ್ಲ ಮಗನಿಂದಲೇ ಸಿಹಿಯ ಲೆಕ್ಕ ಮಾಡಿಸಿ, ತಾನು ಪೊಟ್ಟಣ ಕಟ್ಟುತ್ತಾ, ದೇವರಿಗೆ ಮೊದಲ ನಮಸ್ಕಾರ ಮಾಡಿಸಿ, ಅಜ್ಜನ ಕಾಲುಗಳಿಗೆ ಅಡ್ಡಾಗಲು ಹೇಳಿ, ಪೂರಿ-ಸಾಗುವನ್ನು ತಟ್ಟೆ ಕೀಸಿ ತಿನ್ನಲು ಅಪ್ಪಣೆಯಂತಹದ್ದೊಂದನ್ನು ಕೊಡುತ್ತ, ಪ್ರತಿದಿನದ ಏಳೋ-ಏಳೋ, ಮಾಡೋ-ಮಾಡೋ, ತಿನ್ನೋ-ತಿನ್ನೋ, ಹೊರಡೋ-ಹೊರಡೋ ಗೋಳು ಇಂದು ಇಲ್ಲದಿರುವ ಹಿತಾನುಭವವನ್ನು ಚಪ್ಪರಿಸುತ್ತಿದ್ದ ಅಪ್ಪನು, ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋऽಸ್ತು ತೇ… ಎಂಬ ಹುಟ್ಟಿನ ಸಂಭ್ರಮವನ್ನು ಗುನುಗಿಕೊಳ್ಳುತ್ತ, ನಮ್ ಮಗ ಇವತ್ತು ಏನ್ ಹೇಳಿದ್ರೂ ಯೆಎಸ್ ಯೆಎಸ್ ಯೆಎಸ್… ಎಂದು ಮಗ ಶಾಲೆಗೆ ಹೋಗುವಲ್ಲಿಯವರೆಗೂ ಕಾಲೆಳೆಯುತ್ತಲೇ ಇರುತ್ತಾನೆ.

ಇಷ್ಟೆಲ್ಲ ಆಗಿದ್ದು ಕ್ಯಾಲೆಂಡರ್ ಪ್ರಕಾರದ ಹುಟ್ಟಿನ ದಿನದಂದು ಎಂಬುದು ಮತ್ತೊಂದು ವಿಚಾರ. ಆ ಮಗುವಿನ ಅಪ್ಪನಿಗೆ ಒಂದೇ ಆಸೆ… ಹೆಸರಿನಲ್ಲಿ ಬೆಳಕನ್ನು ಹೊಂದಿರುವ ಭಾಸ್ವಾನನ ಜನ್ಮದಿನ ಭಾರತೀಯ ಸಂಪ್ರದಾಯದಲ್ಲಿ ಆ ಮಗು ಹುಟ್ಟಿದ ತಿಥಿಯಂದೇ ಆಗಬೇಕು, ದೇವದಿವ್ಯದೀಪದ ಮುಂದೆ ಕೂರಿಸಬೇಕು, ದೀಪದಾರತಿಯನ್ನು ಬೆಳಗಬೇಕು, ಮನೆಯೊಳಗಿನ ಸಂಭ್ರಮದ ಬೆವರೇ ಪಾಕವಾಗುವ ಸಿಹಿಯನ್ನು ಜಗದೋದ್ಧಾರನ ಆಡಿಸಿದಳು ಯಶೋದೆ ಎಂಬ ಭಾವಸಾಂದ್ರತೆಯೊಂದಿಗೆ ತಿನ್ನಿಸಬೇಕು, ಆ ಸಿಹಿಯ ಸಹಿಯನ್ನು ಅವನ ವಾರಗೆಯ ಮಕ್ಕಳ ಎದೆಗೆ ಹಚ್ಚಬೇಕು, ಆಗೆಲ್ಲ ಹತ್ತರ ಹರೆಯದ ಆ ಹುಡುಗ ಹುಟ್ಟಿನ ಗುಟ್ಟನ್ನು ಅತಿಶಯವಾಗಿ ತಿಳಿದುಕೊಳ್ಳಲು ಸಾಧ್ಯವಾಗುವ ಆ ದಿನ ಒಳಮುಖನಾಗಿ ಸಂಭ್ರಮಿಸಬೇಕು, ಅದ ಕಂಡು ತಾನೂ ಅಂತರ್ಮುಖಿಯಾಗಬೇಕು.

ಆದರೆ ಅದಾಗಲಿಲ್ಲ. ಮಾಸ ಅಧಿಕವಾಗಿ ಪಂಚಾಂಗದ ತಿಥಿಗೆ ಮುನ್ನ ಕ್ಯಾಲೆಂಡರ್ ತೇದಿ ಬಂದು ಅದೇ ಜ್ಯೇಷ್ಠತೆ ಸಾಧಿಸಿಬಿಟ್ಟಿತು. ಹುಟ್ಟಿನ ಸಂಭ್ರಮ ಆಚರಿಸುವ ತರಾತುರಿಯಲ್ಲಿದ್ದ ಮಗನಿಗೆ ಕ್ಯಾಲೆಂಡರ್ ಅಲ್ಲ ಪಂಚಾಂಗವೆಂದಾಗ ಹರಿದುಬಂದ ಬಳಬಳ ಅವನ ತಾಯಿಯ ಕಂಗಳನ್ನೂ ಕರಗಿಸಿದಾಗ, ಅಪ್ಪ ಪಂಚಾಂಗದ ತಿಥಿಯ ದೊಡ್ಡದರ್ಶನದ ಸುಖಾನುಭವಕ್ಕೆ ಸ್ವಲ್ಪ ವಿರಾಮ ಹಾಕಿಕೊಳ್ಳುತ್ತಾ, ಕ್ಯಾಲೆಂಡರ್ ತಾರೀಕುಗಳು ಸಂಕ್ರಮಣಗಳೊಟ್ಟಿಗೆ ಹೆಜ್ಜೆಹಾಕುವುದನ್ನು ಮನಸ್ಸಿಗೆ ತಂದುಕೊಂಡು, ಆ ಅತಿಶಯದ ದರ್ಶನವು ಇಲ್ಲೂ ಸಾಧ್ಯವೇನೋ ಎಂದು ಸಮಾಧಾನಿಸಿಕೊಂಡು, ಏನ್ ಹೇಳಿದ್ರೂ ಯೆಎಸ್ ಯೆಎಸ್ ಯೆಎಸ್ ಎಂದು ಮಗನ ಕಾಲೆಳೆಯುತ್ತಲೇ, ನೂರೆಂಟು ಗಾಯತ್ರೀ ಜಪ ಮಾಡಿದಾಗ, ತಟ್ಟೆಯಲ್ಲಿ ಹಾಕಿದಷ್ಟನ್ನೂ ಭಕ್ತಿ-ಶದ್ಧೆಗಳಿಂದ ಸೇವಿಸಿದಾಗಷ್ಟೇ ಹಂಚುವ ಸಿಹಿಗೊಂದು ಹೆಚ್ಚುಗಾರಿಕೆ ಎಂದು ಜ್ಞಾಪಿಸುತ್ತ – ಜ್ಞಾಪಿಸಿಕೊಳ್ಳುತ್ತ, ಒಳಗೊಳಗೇ ಬಾಷ್ಪಗಳ ಕಡಲಲ್ಲಿ ಸಂತೋಷಿಸಿ ಬಿಗುಮಾನಿಸುತ್ತಿದ್ದ.

ಅಂತರಂಗದ ಎಚ್ಚರಕ್ಕಾಗಿನ ಕಟ್ಟೆಚ್ಚರದ ಸಂಭ್ರಮಾಚರಣೆ ಎಷ್ಟು ಸುಖದಾಯಿ ಅಲ್ಲವೇ!

#Rashtrotthana #RashtrotthanaParishat #rashtrotthanainrashtraseva #birthday #janmadin #janmotsav #birthdaycelebration

Leave a Reply

Your email address will not be published. Required fields are marked *