
On the occasion of the 80th Independence Day, the book ‘Krantiya Kidi’ released by Rashtrotthana Sahitya
Bengaluru, August 11: Rashtrotthana Sahitya’s 188th publication, ‘Krantiya Kidi’, was released at a simple function held at Keshavakrupa by Sri Mukunda C R, Joint General Secretary (Sahasarakaryavah) of the Rashtriya Swayamsevak Sangh; the book’s author Sri Du Gu Lakshmana; Rashtrotthana Parishat President Sri M P Kumar; General Secretary Sri Na Dinesh Hegde; and Treasurer Sri Narayana K S.
Book purchase link: https://sahityabooks.com/product/krantiya-kidigalu-du-gu-lakshmana-book/
Sparks of Revolution:
The struggle for India’s independence was waged at many levels and in many phases. Countless people fought within their own limits and spheres; they also made the ultimate sacrifices and offered up their lives. When all of these are viewed together, they may not stand out as immense, and may not appear significant. But it is by no means a trivial matter that even such small, individual acts of resistance created the ground that was needed to confront imperialism. Just as a flood forms from drop upon drop joining together, the struggles that many people waged on a personal level gradually became the great wave that drove the British out.
Seen against this background, every freedom fighter introduced in this book shines as an immortal commander; and he awakens in each of our hearts an awareness of the question: what is the ‘price’ that our people paid for freedom, and what ‘price’ must we pay to preserve it?
80ನೇ ಸ್ವಾತಂತ್ರ್ಯೋತ್ಸವದ ಹೊತ್ತಿನಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದಿಂದ ‘ಕ್ರಾಂತಿಯ ಕಿಡಿ’ ಕೃತಿ ಲೋಕಾರ್ಪಣೆ
ಬೆಂಗಳೂರು, ಆಗಸ್ಟ್ 11: ರಾಷ್ಟ್ರೋತ್ಥಾನ ಸಾಹಿತ್ಯದ 188ನೇ ಕೃತಿ, ‘ಕ್ರಾಂತಿಯ ಕಿಡಿ’ಯನ್ನು ಕೇಶವಕೃಪಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದ ಸಿ ಆರ್, ಪುಸ್ತಕದ ಲೇಖಕರಾದ ಶ್ರೀ ದು ಗು ಲಕ್ಷ್ಮಣ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ, ಖಜಾಂಚಿಯವರಾದ ಶ್ರೀ ನಾರಾಯಣ ಕೆ ಎಸ್ ಬಿಡುಗಡೆ ಮಾಡಿದರು.
ಪುಸ್ತಕ ಖರೀದಿ ಕೊಂಡಿ: https://sahityabooks.com/product/krantiya-kidigalu-du-gu-lakshmana-book/
ಕ್ರಾಂತಿಯ ಕಿಡಿಗಳು:
ಭಾರತದ ಸ್ವಾತಂತ್ರ್ಯಕ್ಕಾಗಿ ಹಲವು ಸ್ತರಗಳಲ್ಲಿ, ಹಲವು ಮಜಲುಗಳಲ್ಲಿ ಹೋರಾಟ ನಡೆದಿದೆ. ಅಸಂಖ್ಯ ಜನ ತಮ್ಮ ತಮ್ಮ ಮಿತಿಯಲ್ಲಿ ವ್ಯಾಪ್ತಿಯಲ್ಲಿ ಹೋರಾಡಿದ್ದಾರೆ; ಆತ್ಯಂತಿಕ ತ್ಯಾಗ ಬಲಿದಾನಗಳನ್ನೂ ಮಾಡಿದ್ದಾರೆ. ಅವುಗಳನ್ನೆಲ್ಲ ಒಟ್ಟಾಗಿ ನೋಡುವಾಗ ಅವು ಅಪಾರವಾಗಿ ಎದ್ದು ಕಾಣದಿರಬಹುದು; ಮಹತ್ವದ್ದಾಗಿ ತೋರದಿರಬಹುದು. ಆದರೆ, ಅಂಥ ಸಣ್ಣ ಸಣ್ಣ ಪ್ರತಿರೋಧಗಳೂ ಸಾಮ್ರಾಜ್ಯಶಾಹಿಯನ್ನು ಎದುರಿಸಲು ಅವಶ್ಯವಿದ್ದ ಭೂಮಿಕೆಯನ್ನು ರೂಪಿಸಿದವು ಎಂಬುದು ಗೌಣವಾದ ಸಂಗತಿಯೇನಲ್ಲ. ಹನಿ ಹನಿ ಕೂಡಿಯೇ ಪ್ರವಾಹ ರೂಪುಗೊಳ್ಳುವಂತೆ ವೈಯಕ್ತಿಕ ನೆಲೆಯಲ್ಲಿ ಹಲವರು ನಡೆಸಿದ ಹೋರಾಟವೇ ಕ್ರಮೇಣ ಬ್ರಿಟಿಷರನ್ನು ಹೊಡೆದೋಡಿಸಿದ ಹೆದ್ದರೆಯಾಯಿತು.
ಈ ಹಿನ್ನೆಲೆಯಲ್ಲಿ ನೋಡಿದಾಗ, ಈ ಕೃತಿಯಲ್ಲಿ ಪರಿಚಯಿಸಲ್ಪಟ್ಟಿರುವ ಪ್ರತಿಯೊಬ್ಬ ಸ್ವಾತಂತ್ರ್ಯಯೋಧನೂ ಅಮರಸೇನಾನಿಯಾಗಿ ಕಂಗೊಳಿಸುತ್ತಾನೆ; ನಮ್ಮ ನಮ್ಮ ಮನಗಳಲ್ಲೂ ಸ್ವಾತಂತ್ರ್ಯಕ್ಕಾಗಿ ನಮ್ಮವರು ತೆತ್ತ ಹಾಗೂ ಅದನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ತರಬೇಕಾದ ‘ಬೆಲೆ’ ಏನು? – ಎಂಬುದರ ಅರಿವು ಮೂಡಿಸುತ್ತಾನೆ.
#Rashtrotthana #RashtrotthanaParishat #rashtrotthanainrashtraseva #ಕ್ರಾಂತಿಯಕಿಡಿಗಳು #ರಾಷ್ಟ್ರೋತ್ಥಾನಸಾಹಿತ್ಯ #ಪುಸ್ತಕಲೋಕಾರ್ಪಣೆ #KannadaBooks #RashtrotthanaSahitya #bookrelease
Project Info
- Category: News & Media
- Location: Bengaluru
- Completed Date: 11 Aug 2026















