
Between the yoga practice of the well-fed and comfortable, and this practice in the slum service settlements, there is a world of difference. To each, their own yoga…
For the comfortable to head off to their yoga practice, a spring of inspiration must gush forth the moment they wake up, they need a clean-beautiful-spacious environment, practicing alone at home offers no motivation, the terrace breeze is off-limits, so they burn petrol driving to the nearest yoga studio, fill body and soul with the breath of yoga on a long, comfortable yoga mat alongside cheerful fellow practitioners, feast on Idli-Vada at the South Indian breakfast kitchen, sip coffee, and by the time they return home, a feeling arises that life has been made sacred.
Bengaluru, June 22: Things were not like that at the 222 service settlements that celebrated the 12th International Yoga Day. Roughly 4,000 people took part in the practice. Forget stretching arms and legs — there was barely enough space to sit properly — wherever space could be found, on verandas, terraces, halls, or cots, without so much as seeing the face of a yoga mat, people did yoga on mats, rugs, or even the bare floor. None of the usual concerns — inspiration, motivation, a beautiful studio, an attractive wall — stood in the way. As they say, yoga practice needs less physical comfort and more moisture and expansiveness in the heart — and that, it seemed, was present in full measure.
Even so, since Yoga Day fell on a Sunday this time, it did ask for a holiday, and so the Yoga Salutation was performed at the service settlements on Monday, June 22.
ಹೊಟ್ಟೆ ತುಂಬಿದ ಸುಖಿಗಳ ಯೋಗಾಭ್ಯಾಸಕ್ಕೂ ಸ್ಲಂಗಳಲ್ಲಿನ ಸೇವಾವಸತಿಗಳ ಈ ಅಭ್ಯಾಸಕ್ಕೂ ಅಜಗಜಾಂತರ. ಅವರವರ ಯೋಗ… ಅವರವರಿಗೆ…
ಸುಖಿಗಳು ಯೋಗಾಭ್ಯಾಸಕ್ಕೆ ತೆರಳಬೇಕೆಂದರೆ ಬೆಳಗೇಳುತ್ತಲೇ ಸ್ಫೂರ್ತಿಯ ಚಿಲುಮೆ ಚಿಮ್ಮುತ್ತಿರಬೇಕು, ಸ್ವಚ್ಛ-ಸುಂದರ-ವಿಶಾಲ ಪರಿಸರ ಬೇಕು, ಮನೆಯಲ್ಲಿ ಒಬ್ಬರೇ ಅಭ್ಯಾಸ ಮಾಡೋಣವೆಂದರೆ ಮೋಟಿವೇಷನ್ ಬರುವುದಿಲ್ಲ, ತಾರಸಿಯ ಬೀಸುಗಾಳಿಯಲ್ಲಿ ನಿಷಿದ್ಧ, ಹತ್ತಿರದ ಯೋಗ ಸ್ಟುಡಿಯೋಗೆ ಪೆಟ್ರೋಲನ್ನು ಸುಡುತ್ತಾ ಹೋಗಿ, ಉಲ್ಲಾಸಮಯ ಅಭ್ಯಾಸಿಗಳೊಟ್ಟಿಗೆ ನೀಳ-ಸುಖದಾಯಕವಾದ ಯೋಗ ಮ್ಯಾಟಿನ ಮೇಲೆ ಯೋಗಪ್ರಾಣಗಳನ್ನು ಮೈಮನಗಳಿಗೆ ತುಂಬಿಕೊಂಡು, ಸೌತ್ ತಿಂಡಿ-ಕಿಚನ್‍ನಲ್ಲಿ ಇಡ್ಲಿ-ವಡೆ ಮೆಂದು, ಕಾಫಿ ಹೀರಿ ಮನೆಗೆ ವಾಪಸ್ಸಾಗುವ ಹೊತ್ತಿಗೆ ಜೀವನ ಪಾವನವೆಂಬ ಭಾವ ಮೂಡಿರುತ್ತದೆ.
ಬೆಂಗಳೂರು, ಜೂನ್ 22: 12ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಿದ 222 ಸೇವಾವಸತಿಗಳಲ್ಲಿ ಪರಿಸ್ಥಿತಿ ಹಾಗಿಲ್ಲ. ಹೆಚ್ಚೂಕಡಿಮೆ 4000 ಮಂದಿ ಅಭ್ಯಾಸ ಮಾಡಿದರು. ಕೈ-ಕಾಲು ಚಾಚುವುದು ಬಿಡಿ, ಸರಿಯಾಗಿ ಕೂರಲೂ ಇಷ್ಟೇ ಇಷ್ಟು ಜಾಗ, ವರಾಂಡ-ತಾರಸಿ-ಹಾಲ್-ಮಂಚ ಎಲ್ಲಿ ಜಾಗ ಸಿಕ್ಕಿತೋ ಅಲ್ಲಿ, ಯೋಗ ಮ್ಯಾಟಿನ ಮುಖವನ್ನೂ ನೋಡದೇ, ಚಾಪೆ-ಜಮಖಾನ-ಖಾಲಿ ನೆಲದ ಮೇಲೂ ಯೋಗ ಮಾಡಿದರು. ಸ್ಫೂರ್ತಿ, ಮೋಟಿವೇಷನ್, ಸುಂದರ ಸ್ಟುಡಿಯೋ, ಆಕರ್ಷಕ ಗೋಡೆ ಎಂಬಂತಹ ಯಾವ ವಿಚಾರಗಳೂ ಅಡ್ಡಿಯಾಗಿ ಕಾಡಲಿಲ್ಲ. ಹೇಳುತ್ತಾರಲ್ಲ, ಯೋಗಾಭ್ಯಾಸಕ್ಕೆ ಭೌತಿಕ ಅನುಕೂಲಕ್ಕಿಂತ ಹೃದಯದಲ್ಲೊಂದು ಪಸೆ, ವೈಶಾಲ್ಯ ಎಲ್ಲ ಇರಬೇಕು, ಯೇಗ್ದಾಗ ಎಲ್ಲ ಇದ್ದಂತೆ ಇತ್ತು.
ಇಷ್ಟೆಲ್ಲ ಇದ್ದರೂ, ಭಾನುವಾರ ಬಂದ ಯೋಗದಿನ ರಜೆಯನ್ನು ಬೇಡಿಯೇ ಬೇಡಿತು ಮತ್ತು ಸೋಮವಾರ, ಜೂನ್ 22ರಂದು ಸೇವಾವಸತಿಗಳಲ್ಲಿ ಯೋಗನಮನವನ್ನು ಮಾಡಲಾಯಿತು.
Learn More: https://sevavasati.rashtrotthana.org/
#Rashtrotthana #RashtrotthanaParishat #rashtrotthanainrashtraseva #SevaVasati #SlumDevelopment #integratedslumdevelopment #yoga #IDY #IDY2026 #InternationalDayofYoga #yogademonstration
Project Info
- Category: News & Media
- Location: Bengaluru
- Completed Date: 22 June 2026




















