
Sharanasirasi, May 20: A programme under the Addiction-Free Driver Campaign was organised at Rashtrotthana Vidyakendra – Kalaburagi.
Sharanasirasi, May 20: A programme under the Addiction-Free Driver Campaign was organised at Rashtrotthana Vidyakendra – Kalaburagi. Distinguished guests present on the occasion included Sri Paramananda Sajjan and Sri Shakeel Angadi, Inspectors from the Kalaburagi Regional Transport Office; Sri Krishna Joshi, School Correspondent; and Sri Jayarama Nayak, Head of Rashtrotthana Transport Division, among other dignitaries.
Speaking on the occasion, Sri Paramananda Sajjan said that this campaign should not be limited to just one school but should be conducted across all schools and colleges in Kalaburagi. He explained that adhering to traffic rules reduces accidents, and that only by maintaining a proper lifestyle can many mistakes be prevented. He educated drivers on the precautions to be taken while driving, displayed various road signs, and pointedly remarked that if we do not use these signs, we ourselves may end up as lifeless as they are.
Sri Shakeel Angadi informed the gathering that 180 ITMC cameras have been installed across the city, and that fines would be imposed on those who violate traffic rules.
Sri Jayarama Nayak said that drivers should not merely be drivers — they must be responsible, cultured, and conscientious individuals behind the wheel.
ಶರಣಸಿರಸಗಿ, ಮೇ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ನಶೆ ಮುಕ್ತ ಚಾಲಕ ಅಭಿಯಾನದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಕಲಬುರಗಿ ಪ್ರಾದೇಶಿಕ ಸಾರಿಗೆ ಕಚೇರಿ ಪರಿಶೀಲಕರಾದ ಶ್ರೀ ಪರಮಾನಂದ ಸಜ್ಜನ್, ಶ್ರೀ ಶಕೀಲ್ ಅಂಗಡಿ, ಶಾಲೆಯ ಬಾತ್ಮೀದಾರರಾದ ಶ್ರೀ ಕೃಷ್ಣ ಜೋಶಿ, ರಾಷ್ಟ್ರೋತ್ಥಾನ ಸಾರಿಗೆ ವಿಭಾಗದ ಮುಖ್ಯಸ್ಥರಾದ ಶ್ರೀ ಜಯರಾಮ ನಾಯಕ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀ ಪರಮಾನಂದ ಸಜ್ಜನ್ ಅವರು ಮಾತನಾಡುತ್ತ, ಈ ಅಭಿಯಾನ ಕೇವಲ ಒಂದು ಶಾಲೆಯಲ್ಲಿ ಆಗದೇ ಕಲಬುರಗಿಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಡೆಯಬೇಕು ಎಂದು ಹೇಳಿದರು. ನಿಯಮಗಳನ್ನು ಪಾಲಿಸಿದಲ್ಲಿ ಅಪಘಾತಗಳಾಗುವುದು ಕಡಿಮೆಯಾಗುವುದು, ನಮ್ಮ ಜೀವನಶೈಲಿಯನ್ನು ಸರಿಯಾಗಿ ಇಟ್ಟುಕೊಂಡಾಗ ಮಾತ್ರ ಹಲವಾರು ತಪ್ಪುಗಳನ್ನು ತಡೆಗಟ್ಟಲು ಸಾಧ್ಯವಾಗುವುದು ಹಾಗೂ ವಾಹನ ಚಾಲಕರಿಗೆ ಚಾಲನೆಯ ಸಂದರ್ಭದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತ ಹಲವಾರು ಚಿಹ್ನೆಗಳನ್ನು ತೋರಿಸಿ, ಅವುಗಳನ್ನು ಬಳಸದಿದ್ದರೆ ನಾವು ಅವುಗಳ ಹಾಗೇ ನಿರ್ಜೀವವಾಗಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಶ್ರೀ ಶಕೀಲ್ ಅಂಗಡಿಯವರು ಮಾತನಾಡುತ್ತ, ನಗರದಲ್ಲಿ 180 ITMC ಕ್ಯಾಮೆರಾಗಳನ್ನು ಅಳವಡಿಸಿದ್ದು, ನಿಯಮ ತಪ್ಪಿದವರಿಗೆ ದಂಡ ವಿಧಿಸುವುದಾಗಿ ಹೇಳಿದರು.
ಶ್ರೀ ಜಯರಾಮ ನಾಯಕ್, ಚಾಲಕರು ಕೇವಲ ಚಾಲಕರಾಗಿರದೇ, ಅವರು ಸಜ್ಜನ, ಸಂಸ್ಕಾರಯುತ ಚಾಲಕರಾಗಿರಬೇಕು ಎಂದು ಹೇಳಿದರು.
Learn More: https://klbg.rvkcbse.in/
#Rashtrotthana #RashtrotthanaParishat #rashtrotthanainrashtraseva #RVKCBSE #rvkkalaburagi #PanchamukhiShikshana #DrugFreeDriver #DrugFreeDriverCampaign
Project Info
- Category: News & Media
- Location: Kalaburgi
- Completed Date: 20 May 2026










