
Space Programme Workshop for RVK Students by Dassault Systèmes, ISRO and SSERD
Bengaluru, July 21-25: Around 30 Students from JGRVK – Ramamurthy Nagar, RVK – Arkavathy and JGRV – Kalyan Nagar participated in a five-day Space Programme Workshop led by experts from Dassault Systèmes, ISRO and SSERD.
Through hands-on sessions in satellite design, rocket technology and space science, along with an educational visit to the Dassault Systèmes office, students gained valuable exposure to both scientific concepts and industry applications.
The workshop concluded with a project showcase at RVK – Banashankari, where participants presented their working models and demonstrated their learning. The programme successfully fostered scientific temper, innovation, teamwork and problem-solving skills, inspiring students to explore opportunities in space science and engineering.
ಡಸಾಲ್ಟ್ ಸಿಸ್ಟಮ್ಸ್, ಇಸ್ರೋ ಮತ್ತು SSERD ವತಿಯಿಂದ RVK ವಿದ್ಯಾರ್ಥಿಗಳಿಗಾಗಿ ಬಾಹ್ಯಾಕಾಶ ಕಾರ್ಯಕ್ರಮ ಕಾರ್ಯಾಗಾರ
ಬೆಂಗಳೂರು, ಜುಲೈ 21–25: JGRVK – ರಾಮಮೂರ್ತಿನಗರ, RVK – ಅರ್ಕಾವತಿ ಹಾಗೂ JGRV – ಕಲ್ಯಾಣನಗರದ ಸುಮಾರು 30 ವಿದ್ಯಾರ್ಥಿಗಳು, ಡಸಾಲ್ಟ್ ಸಿಸ್ಟಮ್ಸ್, ಇಸ್ರೋ ಮತ್ತು SSERD ಸಂಸ್ಥೆಗಳ ತಜ್ಞರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಐದು ದಿನಗಳ ಬಾಹ್ಯಾಕಾಶ ಕಾರ್ಯಕ್ರಮ ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಉಪಗ್ರಹ ವಿನ್ಯಾಸ, ರಾಕೆಟ್ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನ ಕುರಿತ ಪ್ರಾಯೋಗಿಕ ತರಬೇತಿ ಹಾಗೂ ಡಸಾಲ್ಟ್ ಸಿಸ್ಟಮ್ಸ್ ಕಚೇರಿಗೆ ಶೈಕ್ಷಣಿಕ ಭೇಟಿ ಮೂಲಕ ವಿದ್ಯಾರ್ಥಿಗಳು ವೈಜ್ಞಾನಿಕ ಪರಿಕಲ್ಪನೆಗಳು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಅವುಗಳ ಅನ್ವಯಗಳ ಕುರಿತು ಅಮೂಲ್ಯ ಅನುಭವವನ್ನು ಪಡೆದರು.
RVK – ಬನಶಂಕರಿಯಲ್ಲಿ ನಡೆದ ಯೋಜನಾ ಪ್ರದರ್ಶನದೊಂದಿಗೆ ಕಾರ್ಯಾಗಾರವು ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಾವು ರೂಪಿಸಿದ ಕಾರ್ಯನಿರ್ವಹಣಾ ಮಾದರಿಗಳನ್ನು ಪ್ರದರ್ಶಿಸಿ, ಕಾರ್ಯಾಗಾರದಲ್ಲಿ ತಾವು ಕಲಿತ ವಿಷಯಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ನಾವೀನ್ಯತೆ, ತಂಡಭಾವನೆ ಹಾಗೂ ಸಮಸ್ಯೆ ಪರಿಹರಿಸುವ ಕೌಶಲಗಳನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು. ಅಲ್ಲದೆ, ಬಾಹ್ಯಾಕಾಶ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಅವಕಾಶಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿತು.
Learn More: https://rvkcbse.in/
#Rashtrotthana #RashtrotthanaParishat #rashtrotthanainrashtraseva #RVK #RVKCBSE #RashtrotthanaVidyaKendra #RashtrotthanaSchool #PanchamukhiShikshana #spaceprogrammeworkshop #jgrvk #rvkarkavathy #jgrv #rvkbanashankari
Project Info
- Category: News & Media
- Location: Bengaluru
- Completed Date: 25 July 2026













