
Bengaluru, July 12: A one-day training programme was organised at the Jayanagar Yoga Centre for 132 Rashtrotthana Yoga teachers, comprising 20 full-time and 112 honorary teachers.
The practical training, which began at 6 a.m., continued with special sessions by Prof. Apar Saoji of S-VYASA Yoga University on the effects of asanas and pranayama on the body and mind; Vidwan Jagadish Sharma Samp on yoga for social well-being; and Sri Nagendra Kamath, Director, Rashtrotthana Yoga, on the characteristics of an excellent yoga class.
At the valedictory ceremony in the evening, 12 dedicated yoga teachers who have been serving as honorary teachers at Rashtrotthana Yoga for more than 15 years were felicitated by Sri Na. Dinesh Hegde, General Secretary, Rashtrotthana, and Sri Narayana K. S., Treasurer, Rashtrotthana.
Honorary Yoga Teachers felicitated:
- Smt. L. Angammal (KG Nagar)
- Smt. Sudha P. (KG Nagar)
- Smt. Usha Ramanath (Jayanagar)
- Sri Kunchitapatham T. (Jayanagar)
- Smt. Triveni Anil Kumar (Sunkenahalli)
- Smt. Shashi S. Bhat (KG Nagar)
- Smt. Ravikala L. (Jayanagar)
- Smt. Shashikala Udupa (KG Nagar)
- Smt. Dhanalakshmi (Sunkenahalli)
- Smt. Uma Mahesh (KG Nagar)
- Smt. M. Kavitha (Jayanagar)
- Smt. Vishalakshi G. (KG Nagar)
ರಾಷ್ಟ್ರೋತ್ಥಾನದಲ್ಲಿ 112 ಗೌರವ ಶಿಕ್ಷಕರನ್ನೊಳಗೊಂಡು 132 ಯೋಗ ಶಿಕ್ಷಕರಿಗೆ ಪ್ರಶಿಕ್ಷಣ ಹಾಗೂ 15+ ವರ್ಷಗಳಿಂದ ಸೇವಾವ್ರತಿಗಳಾಗಿರುವ 12 ಯೋಗ ಶಿಕ್ಷಕರಿಗೆ ಸಾದರ ಸಮ್ಮಾನ
ಬೆಂಗಳೂರು, ಜುಲೈ 12: ರಾಷ್ಟ್ರೋತ್ಥಾನ ಯೋಗದ 132 ಯೋಗ ಶಿಕ್ಷಕರಿಗೆ (20 ಪೂರ್ಣಾವಧಿ + 112 ಗೌರವ ಶಿಕ್ಷಕರು) ಒಂದು ದಿನದ ಪ್ರಶಿಕ್ಷಣವರ್ಗವನ್ನು ಜಯನಗರ ಯೋಗಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಬೆಳಗ್ಗೆ 6 ರಿಂದ ಪ್ರಾರಂಭವಾದ ಪ್ರಾಯೋಗಿಕ ತರಬೇತಿ S-VYASA ಯೋಗ ವಿಶ್ವವಿದ್ಯಾಲಯದ ಪ್ರೊ. ಅಪಾರ್ ಸಾವೋಜಿಯವರ ದೇಹ ಹಾಗೂ ಮನಸ್ಸಿನ ಮೇಲೆ ಆಸನ-ಪ್ರಾಣಾಯಾಮದ ಪರಿಣಾಮ, ವಿದ್ವಾನ್ ಜಗದೀಶಶರ್ಮಾ ಸಂಪ ಅವರ ಸಾಮಾಜಿಕ ಸ್ವಾಸ್ಥ್ಯಕ್ಕೆ ಯೋಗ ಹಾಗೂ ರಾಷ್ಟ್ರೋತ್ಥಾನ ಯೋಗದ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಅವರ ಉತ್ಕೃಷ್ಟ ಯೋಗ ತರಗತಿಯ ಲಕ್ಷಣಗಳೆಂಬ ವಿಶೇಷ ಅವಧಿಗಳೊಂದಿಗೆ ಮುಂದುವರೆಯಿತು.
ಸಂಜೆಯ ಸಮಾರೋಪ ಸಮಾರಂಭದಲ್ಲಿ 15ಕ್ಕೂ ಹೆಚ್ಚಿನ ವರ್ಷಗಳಿಂದ ರಾಷ್ಟ್ರೋತ್ಥಾನ ಯೋಗದಲ್ಲಿ ಗೌರವ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ 12 ಸೇವಾವ್ರತಿಗಳನ್ನು ರಾಷ್ಟ್ರೋತ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಹಾಗೂ ಖಜಾಂಚಿಗಳಾದ ಶ್ರೀ ನಾರಾಯಣ ಕೆ ಎಸ್ ಅವರು ಗೌರವಿಸಿದರು.
ಸಾದರ ಸಮ್ಮಾನ ಸ್ವೀಕರಿಸಿದ ಯೋಗದ ಗೌರವ ಶಿಕ್ಷಕರು:
- ಶ್ರೀಮತಿ ಎಲ್ ಅಂಗಮಾಲ್ (ಕೆಜಿ ನಗರ)
- ಶ್ರೀಮತಿ ಸುಧಾ ಪಿ (ಕೆಜಿ ನಗರ)
- ಶ್ರೀಮತಿ ಉಷಾ ರಾಮನಾಥ್ (ಜಯನಗರ)
- ಶ್ರೀ ಕುಂಚಿತಪಥಂ ಟಿ (ಜಯನಗರ)
- ಶ್ರೀಮತಿ ತ್ರಿವೇಣಿ ಅನಿಲ್ ಕುಮಾರ್ (ಸುಂಕೇನಹಳ್ಳಿ)
- ಶ್ರೀಮತಿ ಶಶಿ ಎಸ್ ಭಟ್ (ಕೆಜಿ ನಗರ)
- ಶ್ರೀಮತಿ ರವಿಕಲ ಎಲ್ (ಜಯನಗರ)
- ಶ್ರೀಮತಿ ಶಶಿಕಲಾ ಉಡುಪ (ಕೆಜಿ ನಗರ)
- ಶ್ರೀಮತಿ ಧನಲಕ್ಷ್ಮಿ (ಸುಂಕೇನಹಳ್ಳಿ)
- ಶ್ರೀಮತಿ ಉಮಾ ಮಹೇಶ್ (ಕೆಜಿ ನಗರ)
- ಶ್ರೀಮತಿ ಎಂ ಕವಿತ (ಜಯನಗರ)
- ಶ್ರೀಮತಿ ವಿಶಾಲಾಕ್ಷಿ ಜಿ (ಕೆಜಿ ನಗರ)
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #rashtrotthanayoga #rysri #yoga #yogateachertraining
Project Info
- Category: News & Media
- Location: Jayanagar,Bengaluru
- Completed Date: 12 July 2026





















