Before the tormenting heat of false accusations, the suffering of the accused is nothing!
— Shri Bharateesha P., Convenor, Rashtrotthana Media Centre
Ramesh was still young. Even in his boyhood, he had a certain attraction towards spirituality. He did not find college education, which he could otherwise have pursued quite well, appealing. He left it halfway and joined a service organisation.
As soon as he joined, he was given positions and responsibilities. Even though he knew that Yogeesh, who was already there, had been pushed aside using some flimsy pretext, he somehow failed to notice it—or perhaps chose not to take it seriously.
ವೃಥಾ ಆಪಾದಕರ ತಪನಾ ತಾಪದ ಮುಂದೆ ಆಪಾದಿತರ ದುಃಖ ಏನೇನೂ ಅಲ್ಲ
ಶ್ರೀ ಭಾರತೀಶ ಪಿ, ಸಂಚಾಲಕ, ರಾಷ್ಟ್ರೋತ್ಥಾನ ಮಾಧ್ಯಮ ಕೇಂದ್ರ

ರಮೇಶ ಇನ್ನೂ ತಾರುಣ್ಯದಲ್ಲಿದ್ದ. ಹುಡುಗು ಪ್ರಾಯದಲ್ಲೇ ಒಂದು ರೀತಿಯ ಅಧ್ಯಾತ್ಮದ ಸೆಳೆತ ಅವನಿಗೆ. ಚೆನ್ನಾಗಿ ಹತ್ತಬಹುದಾಗಿದ್ದ ಕಾಲೇಜು ಶಿಕ್ಷಣ ರುಚಿಸಲಿಲ್ಲ. ಅದನ್ನು ಅರ್ಧಕ್ಕೇ ಬಿಟ್ಟು ಸೇವಾಸಂಸ್ಥೆಯೊಳಗೆ ಸೇರಿಕೊಂಡ.
ಸೇರಿಕೊಳ್ಳುತ್ತಲೇ ಸ್ಥಾನಮಾನಗಳೆಲ್ಲ ಸಿಕ್ಕಿದವು. ಅದೇ ಜಾಗದಲ್ಲಿದ್ದ ಯೋಗೀಶನ್ನು ಏನೋ ಒಂದು ಕುಂಟು ನೆಪ ಹೇಳಿ ಅಲ್ಲಿಂದ ಜಾರಿಸಿದ್ದು ಗೊತ್ತಾಗಿಯೂ, ಗಮನಕ್ಕೇ ಬರದೇ ಹೋಯಿತು.
ಇನ್ನೂ ಹುಡುಗಾಟಿಕೆ, ಒಂದಷ್ಟು ಕೆಲಸಗಳು ಆಗುತ್ತಿದ್ದವು, ಮತ್ತೊಂದಷ್ಟು ಹಾಗೆಯೇ ಮಲಗಿಕೊಳ್ಳುತ್ತಿದ್ದವು. ಮಧ್ಯದಲ್ಲಿ ಅಧ್ಯಾತ್ಮದ ದಾಹ ನಿವಾರಣೆಗೂ ದಾರಿ ತೆರೆಯಿತು. ಅದರಲ್ಲಿ ಸಂಸ್ಥೆಯ ಮುಖ್ಯಸ್ಥರ ಪಾತ್ರವೂ ದೊಡ್ಡದಿತ್ತೆಂಬುದು ಮರೆಯಲಾಗದ ವಿಚಾರ.
ಎರಡು-ಮೂರು ವರುಷಗಳು ಹಾಗೇ ಉರುಳಿದವು. ಸಂಸ್ಥೆಯ ಮುಖ್ಯಸ್ಥರಿಗೆ ರಮೇಶ ಬೇಡವಾದ. ಬೇಡವೆಂದು ಸಲೀಸಾಗಿ ಹೇಳುವ ದೊಡ್ಡ ಮನಸ್ಸು ದೊಡ್ಡವರಿಗೆ ಆಗಲೇ ಇಲ್ಲ.
ಹಾಗಾಗಿ ದೊಡ್ಡ ಕಥೆಯನ್ನೇ ಹೆಣೆದು, ಮೌನವ್ರತದಲ್ಲಿದ್ದ ದೊಡ್ಡ ಹಿರಿಯರೊಬ್ಬರನ್ನು ಸಭೆಗೆ ಎಳೆದು ತಂದು, ಅವರ ಅಧ್ಯಕ್ಷತೆಯಲ್ಲಿ ಗುರುಗಳು ಪ್ರಸಾದವಾಗಿ ಕರುಣಿಸಿದ ಸ್ವರ್ಣಾಭರಣಗಳನ್ನು ರಮೇಶ ಕದ್ದಿದ್ದಾನೆಂದು ಕೋಪತಾಪಗಳೊಂದಿಗೆ ಆಣೆ-ಪ್ರಮಾಣಗಳನ್ನು ಮಾಡಿಸುತ್ತಾ ಮುಖ್ಯಸ್ಥರು ಹೇಳುತ್ತಿದ್ದರೆ, ರಮೇಶನಿಗೆ ಅಳುವೊಂದೇ, ಧಾರಕಾರ ನೀರು ಸುರಿದು, ಏನಾಗುತ್ತಿದೆ ಎಂದು ತಿಳಿಯುವುದರೊಳಗೇ ರಮೇಶ ಸಂಸ್ಥೆಯಿಂದ ಹೊರಬೀಳಬೇಕಾಯಿತು. ಆಗ ತನ್ನ ಜಾಗದಲ್ಲಿದ್ದ ಯೋಗೀಶ ಏಕೆ ಮೂಲೆಗೆ ಸರಿದ ಎನ್ನುವುದು ಹೆಚ್ಚು ಅರ್ಥವಾಗತೊಡಗಿತು.
ಮತ್ತೆ ಮೂರ್ನಾಲ್ಕು ವರ್ಷಗಳ ಚಕ್ರ ತಿರುಗಿತು. ರಮೇಶನ ಮನಸ್ಸಿನಿಂದ ಆ ಒಂದು ಆಪಾದನೆಯ ನೋವು ಹಾಗೇ ಮಾಸುತ್ತಾ “ತನ್ನದೇನೋ ಪರವಾಗಿಲ್ಲ, ಆಪಾದಿತನಷ್ಟೇ, ಅಪರಾಧವೆಸಗಿಲ್ಲ ಎಂಬ ಖಾತರಿಯಿದೆ. ಆದರೆ ವೃಥಾ ಆಪಾದನೆ ಹೊರಿಸಿದ ಸಂಸ್ಥೆಯ ಮುಖ್ಯಸ್ಥರ ಪರಿಸ್ಥಿತಿ ಹೇಗಾಗಿರಬೇಡ! ಅವರಿಗೆ ನೆಮ್ಮದಿಯ ನಿದ್ರೆಗಳು ಬರುತ್ತಿವೆಯಾ?” ಎಂಬ ಪ್ರಶ್ನೆಗಳು ಮೂಡುತ್ತಾ ಅವರ ಬಗೆಗೆ ರಮೇಶ ಕನಿಕರಿಸುತ್ತಿದ್ದ.
ಮುಂದೆ ರಮೇಶನ ಮದುವೆ. ಏನೇ ಆಗಿರಲಿ ಆ ಸಂಸ್ಥೆಯ ಮುಖ್ಯಸ್ಥರು ಗುರುಮಾರ್ಗ ತೋರಿದವರು ಎಂಬ ಕೃತಜ್ಞತೆಯಿಂದ ಅವರನ್ನೂ ಆಮಂತ್ರಿಸಲಾಯಿತು. ಮುಖ್ಯಸ್ಥರು ಮುಖ್ಯ ಸಮಾರಂಭಕ್ಕೆ ಬರದೇ, ಆಮೇಲೆ ಎಷ್ಟೊತ್ತಿಗೋ ಬಂದಾಗ ರಮೇಶನಿಗೆ ತಡೆಯಲಾಗಲಿಲ್ಲ. ಅಳುತ್ತಾ ಅವರ ಕಾಲಿಗೆ ಬಿದ್ದೇಬಿಟ್ಟ. ಆಗ ಮುಖ್ಯಸ್ಥರು “ರಮೇಶಾ! ಹಳೇಯದೆಲ್ಲ ಈಗೇಕೆ? ಬಿಟ್ಟುಬಿಡು” ಎಂದರು. ಆದರೆ ರಮೇಶನಿಗೆ “ಇವರೂ ಬಂದರಲ್ಲ” ಎಂದಾದ ಖುಷಿ ಮುಖ್ಯಸ್ಥರಿಗೆ ಅರ್ಥವಾಗಲೇ ಇಲ್ಲ.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #ShortStory #EmotionalJourney #Karma #GuiltAndForgiveness #HumanEmotions







