Sri Siddharoodha Swamigalu: Enthroned in the Hearts of the Devotees of Hubballi-Dharwad
In the pre-independence era, when many parts of Karnataka, Maharashtra, and Andhra Pradesh were worn down by the misrule and oppression of the Bahamani and Adil Shahi dynasties, many great yogis and Siddha-Sharanas took birth and continued to revive the eternal spiritual tradition that was on the verge of vanishing. Among such great souls who lived and stood foremost in that line was none other than Sri Siddharoodha Swamigalu of Hubballi!
Born on March 27, 1836, he had no desire for worldly life even from childhood. Giving up play, friendships, home, and property, that boy who took to the path of knowledge found the true turning point in his life after coming into contact with his guru, Gajadanda Shivayogigalu (Fakeeraswamigalu). After receiving guidance from his guru, he practiced long penance and ultimately made Hubballi his karmabhoomi (field of action/work).
ಹುಬ್ಬಳ್ಳಿ–ಧಾರವಾಡದ ಭಕ್ತಜನ ಹೃದಯಾರೂಢ ಶ್ರೀ ಸಿದ್ಧಾರೂಢ ಸ್ವಾಮಿಗಳು

ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಹಲವಾರು ಭಾಗಗಳು, ಬಹಮನಿ ಹಾಗೂ ಆದಿಲ್ ಶಾಹೀ ವಂಶಸ್ಥರ ದುರಾಡಳಿತದಿಂದ, ದಬ್ಬಾಳಿಕೆಯಿಂದ ಬಸವಳಿದಿದ್ದ ಕಾಲದಲ್ಲಿ ಅನೇಕ ಮಹಾಯೋಗಿಗಳು, ಸಿದ್ಧ-ಶರಣರು ಅವತರಿಸಿ ನಶಿಸಿ ಹೋಗಿತ್ತಿದ್ದ ಸನಾತನ ಆಧ್ಯಾತ್ಮಿಕ ಪರಂಪರೆಯನ್ನು ಮತ್ತೊಮ್ಮೆ ಪುನರುಜ್ಜೀವಗೊಳಿಸುತ್ತಾ ಬಂದಿದ್ದಾರೆ. ಅಂತಹ ಮಹಾಚೇತನರ ಸಾಲಲ್ಲಿ ಅಗ್ರಗಣ್ಯರಾಗಿ ಬಾಳಿ ಬದುಕಿದ ಸಂತರೇ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಗಳು!
ಮಾರ್ಚ್ 27, 1836ರಲ್ಲಿ ಜನಿಸಿದ ಇವರಿಗೆ ಬಾಲ್ಯದಿಂದಲೇ ಲೌಕಿಕ ಜೀವನ ಬೇಡವಾಗಿತ್ತು. ಆಟ-ಸ್ನೇಹ-ಮನೆ-ಆಸ್ತಿ ಎಲ್ಲವನ್ನೂ ತೊರೆದು, ಜ್ಞಾನದ ಹಾದಿ ಹಿಡಿದ ಆ ಬಾಲಕನ ಜೀವನಕ್ಕೆ ನಿಜವಾದ ತಿರುವು ಸಿಕ್ಕಿದ್ದು ಅವರ ಗುರು ಗಜದಂಡ ಶಿವಯೋಗಿಗಳ (ಫಕೀರಸ್ವಾಮಿಗಳ) ಸಂಪರ್ಕವಾದ ಮೇಲೆ. ಗುರೂಪದೇಶ ಪಡೆದ ನಂತರ ದೀರ್ಘ ತಪಸ್ಸನ್ನು ಆಚರಿಸಿ, ಅಂತಿಮವಾಗಿ ಹುಬ್ಬಳ್ಳಿಯನ್ನೇ ತಮ್ಮ ಕರ್ಮಭೂಮಿಯಾಗಿಸಿಕೊಂಡರು.
ಇಂದು ಸ್ವಾಮಿಗಳು ನೆಲೆಸಿದ್ದ ಮೂಲ ಸ್ಥಳವೇ ಸಿದ್ಧಾರೂಢ ಮಠವಾಗಿ ನಿಂತಿದೆ. ಸಾಮಾಜಿಕ ಮತ್ತು ಧಾರ್ಮಿಕ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಪ್ರತಿವರ್ಷ ಲಕ್ಷಾಂತರ ಜನರಿಗೆ ಉಚಿತವಾಗಿ ಅನ್ನದಾಸೋಹ ನಡೆಯುತ್ತದೆ. ಈ ಮಠದ ಅಡಿಯಲ್ಲಿ ಅನೇಕ ಧರ್ಮಶಾಲೆಗಳು ಮತ್ತು ಸಂಸ್ಕೃತ ಪಾಠಶಾಲೆಗಳು ನಡೆಯುತ್ತಿವೆ.
‘ವೀರಶೈವ’ ಮತ್ತು ‘ಅದ್ವೈತ’ ಸಿದ್ಧಾಂತಗಳ ಸಮನ್ವಯವೇ ಅವರ ತತ್ತ್ವಜ್ಞಾನದ ಮೂಲಾಧಾರ. “ಆತ್ಮವೇ ಶಿವ, ಶಿವನೇ ಆತ್ಮ” ಎಂಬ ಗಹನವಾದ ತತ್ತ್ವವನ್ನು ಅವರು ಸರಳವಾಗಿ ಪ್ರತಿಪಾದಿಸಿದರು. ಜಾತಿ-ಮತ-ಭೇದಗಳಿಲ್ಲದೇ ಎಲ್ಲರಲ್ಲೂ ದೈವವನ್ನು ಕಾಣಬೇಕು ಎಂಬ ಸಂದೇಶ ಅವರದಾಗಿತ್ತು. ಕಾಯಕ ಮತ್ತು ದಾಸೋಹದ ಮಹತ್ವವನ್ನು ಅವರು ಬದುಕಿ ತೋರಿಸಿದರು, ಕೇವಲ ಬೋಧಿಸಲಿಲ್ಲ.
ಆ ಮಹಾತ್ಮರು “ಸರ್ವಜನ ಹಿತಾಯ, ಸರ್ವಜನ ಸುಖಾಯ” ಎಂಬ ಮಹಾನ್ ತತ್ತ್ವ-ದರ್ಶನವನ್ನು ಬೋಧಿಸಿದರು. ಬಾಹ್ಯ ಆಚರಣೆಗಳಿಗಿಂತ ಅಂತರಂಗ ಶುದ್ಧಿ ಮತ್ತು ಪರೋಪಕಾರವೇ ನಿಜವಾದ ಧರ್ಮ ಎನ್ನುತ್ತಿದ್ದರು. ಅವರ ವಿಶೇಷ ಗುಣವೆಂದರೆ, ಶ್ರೀಮಂತ-ಬಡವ, ಪಂಡಿತ-ಅಜ್ಞಾನಿ ಎಂಬ ಭೇದವಿಲ್ಲದೇ ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದುದು. ಅವರ ಉಪಸ್ಥಿತಿಯಲ್ಲಿ ಜನರಿಗೆ ಮನಶ್ಶಾಂತಿ ಮತ್ತು ಸ್ಫೂರ್ತಿ ದೊರೆಯುತ್ತಿತ್ತು ಎಂಬ ಪ್ರಸಂಗಗಳು, ಉಲ್ಲೇಖಗಳು ಹಾಗೂ ದಾಖಲೆಗಳಿವೆ.
ಇವರ ಪ್ರಭಾವ ಸಾಮಾನ್ಯ ಭಕ್ತರ ಮೇಲಷ್ಟೇ ಸೀಮಿತವಾಗಿರದೇ, ದೇಶದ ಅನೇಕ ಗಣ್ಯ ವ್ಯಕ್ತಿಗಳನ್ನೂ ಪ್ರೇರೇಪಿಸುವಂಥ ವ್ಯಕ್ತಿವಿಶೇಷರಾಗಿದ್ದುರು. 1918ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾಮಿಗಳನ್ನು ಭೇಟಿಯಾದ ನಂತರ, “ಸಿದ್ಧಾರೂಢರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ದೈವೀ ಶಕ್ತಿಯ ಸಾಕಾರ ರೂಪ” ಎಂದು ಶ್ಲಾಘಿಸಿದ್ದರು. 1924ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿ ಗಾಂಧೀಜಿಯವರು ಮಠಕ್ಕೆ ಭೇಟಿ ನೀಡಿ, “ಇಲ್ಲಿ ಜಾತಿ ಮತ್ತು ವರ್ಗಗಳ ನಡುವಿನ ಗೋಡೆಗಳು ಕುಸಿದಿವೆ; ಇದುವೇ ನಿಜವಾದ ಭಾರತ” ಎಂದು ಉದ್ಗರಿಸಿದ್ದರು. ಜನಸಾಮಾನ್ಯರಂತೂ ಇವರನ್ನು ‘ನಡೆದಾಡುವ ದೇವರು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. 1929ರಲ್ಲಿ ಅವರು ಲಿಂಗೈಕ್ಯರಾದರು. ಆದರೆ ಅವರ ಬೋಧನೆಗಳು ಮಠದ ಮೂಲಕ ಇಂದಿಗೂ ಜೀವಂತವಾಗಿವೆ.
ಅವರ ಶಿಷ್ಯ ಶ್ರೀ ಗುರುನಾಥಾರೂಢರ ಕಥೆ ಕೂಡ ಅಷ್ಟೇ ಮನಮುಟ್ಟುವಂಥದ್ದು. ಗುರುಗಳು ಪರೀಕ್ಷೆಗಾಗಿ ಕೆರೆಗೆ ಹಾರಲು ಹೇಳಿದ ತಕ್ಷಣ, ಒಂದು ಕ್ಷಣವೂ ಯೋಚಿಸದೇ ಸಿದ್ಧರಾದ ಅವರ ಆ ಅಚಲ ಭಕ್ತಿಯ ನೆನಪಿನಲ್ಲಿ ಹುಬ್ಬಳ್ಳಿಯ ‘ಗುರುನಾಥ ಕೆರೆ’ ಇಂದಿಗೂ ಅವರ ಹೆಸರನ್ನು ಹೊತ್ತು ನಿಂತಿದೆ. 1929ರಲ್ಲಿ ಅವರು ಲಿಂಗೈಕ್ಯರಾದರು. ಆದರೆ ಅವರು ಹೇಳಿದ ಮಾತು ಇಂದಿಗೂ ಅಷ್ಟೇ ಪ್ರಸ್ತುತ. “ನಿನ್ನನ್ನು ನೀನು ತಿಳಿದರೆ, ಸರ್ವವೂ ತಿಳಿದಂತೆ.” ಅವರ ಜನ್ಮೋತ್ಸವದ ಸುದಿನದಂದು ಅವರ ಜೀವನದ ಮೌಲ್ಯವನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಂಡಲ್ಲಿ ಅದೇ ಅವರಿಗೆ ಸಲ್ಲಿಸುವ ನಿಜವಾದ ಶರಣು ಶರಣಾರ್ಥಿ.
ಶ್ರೀ ಸಿದ್ಧಾರೂಢ ಸ್ವಾಮಿಗಳ ಪಾದಾರವಿಂದಗಳಿಗೆ ಕೋಟಿ ಕೋಟಿ ನಮನಗಳು.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #siddharudhaswamiji #siddharudhamath







