
Aradhana Mahotsava at Keshavashilpa
Bengaluru, Jan. 24: Students of Rashtrotthana Natya Sangeetha Kendra, Sunkenahalli, celebrated the Aradhana Mahotsava at Keshavashilpa in honour of the Trinity of Carnatic Music — Sri Tyagaraja, Sri Muttuswami Dikshitar, and Sri Shyama Shastri — as well as Sri Purandaradasa, who is regarded as the father of Carnatic Music.
Renowned Bharatanatyam artist Smt. Suma Aithal was the Chief Guest and spoke about the significance of the Aradhana Mahotsava. Sri Nagendra Kamat, Director of Rashtrotthana Yoga Kendras, was also present on the dais.
Various students of the Natya Sangeetha Kendra gave cultural performances during the celebration. At the end of the programme, certificates were distributed to all the participating children.
ಕೇಶವಶಿಲ್ಪದಲ್ಲಿ ಆರಾಧನಾ ಮಹೋತ್ಸವ
ಬೆಂಗಳೂರು, ಜ.24: ರಾಷ್ಟ್ರೋತ್ಥಾನ ನೃತ್ಯ ಸಂಗೀತ ಕೇಂದ್ರ – ಸುಂಕೇನಹಳ್ಳಿಯ ವಿದ್ಯಾರ್ಥಿಗಳು ಕರ್ನಾಟಕ ಸಂಗೀತದ ತ್ರಿಮೂರ್ತಿಗಳಾದ ಶ್ರೀ ತ್ಯಾಗರಾಜರು, ಶ್ರೀ ಮುತ್ತುಸ್ವಾಮಿ ದೀಕ್ಷಿತರ್, ಶ್ರೀ ಶ್ಯಾಮಾಶಾಸ್ತ್ರಿಗಳು ಹಾಗೂ ಕರ್ನಾಟಕ ಸಂಗೀತ ಪಿತಾಮಹರಾದಂತಹ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವವನ್ನು ಕೇಶವಶಿಲ್ಪದಲ್ಲಿ ಆಚರಿಸಿದರು.
ಖ್ಯಾತ ಭರತನಾಟ್ಯ ಕಲಾವಿದೆಯಾದ ಶ್ರೀಮತಿ ಸುಮಾ ಐತಾಳ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಆರಾಧನಾ ಮಹೋತ್ಸವದ ವಿಶೇಷತೆಯ ಕುರಿತಾಗಿ ಮಾತನಾಡಿದರು. ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಯೋಗಕೇಂದ್ರಗಳ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಅವರು ಉಪಸ್ಥಿತರಿದ್ದರು.
ಆರಾಧನಾ ಮಹೋತ್ಸವದಲ್ಲಿ ನೃತ್ಯ ಸಂಗೀತ ಕೇಂದ್ರದ ವಿವಿಧ ಕಲಾಭ್ಯಾಸೀ ವಿದ್ಯಾರ್ಥಿಗಳು ಕಲಾ ಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.
Learn More: https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaInRashtraseva #Yoga #RashtrotthanaYoga #RYSRI #RashtrotthanaDanceMusic #aaradhanamahotsav
Project Info
- Category: News & Media
- Location: Keshavashilpa,Bengaluru
- Completed Date: 24 Jan 2026

























