
Bengaluru, Sept 6: As a part of 60th Anniversary celebration of Rashtrotthana, the Rashtrotthana Blood Centre – Bengaluru, which has a history of 32 years, organized Blood Donation Camp Organisers 4th Convention herein Keshava Shilpa Auditorium, Kempegowda Nagar.
ಬೆಂಗಳೂರು, ಸ. 6: ರಾಷ್ಟ್ರೋತ್ಥಾನ 60 ಸಂಭ್ರಮದಲ್ಲಿ 32 ವರ್ಷಗಳ ಇತಿಹಾಸವಿರುವ ರಾಷ್ಟ್ರೋತ್ಥಾನ ರಕ್ತಕೇಂದ್ರ – ಬೆಂಗಳೂರು, ರಕ್ತದಾನ ಶಿಬಿರ ಆಯೋಜಕರ 4ನೇ ಸಮಾವೇಶವನ್ನು ಇಲ್ಲಿನ ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರದಲ್ಲಿ ಆಯೋಜಿಸಿತ್ತು.
ಡಾ. ಎಂ. ಕೆ. ರಮೇಶ್, ಅಧ್ಯಕ್ಷರು, ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿ (MARB), ರಾಷ್ಟ್ರೀಯ ವೈದ್ಯಕೀಯ ಆಯೋಗ (NMC), ಆ.ಕು.ಕ.ಇ, ಭಾರತ ಸರ್ಕಾರ, ಇವರು ಗಂಡ, ಹೆಂಡತಿಗೇ ರಕ್ತಕೊಡಲು ಹಿಂದೇಟು ಹಾಕುವ ಈ ಕಾಲದಲ್ಲೂ ರಾಷ್ಟ್ರೋತ್ಥಾನ ರಕ್ತಕೇಂದ್ರ ಹಾಗೂ ರಕ್ತದಾನ ಶಿಬಿರ ಆಯೋಜಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳುತ್ತಾ ವೈದ್ಯಕೀಯ ವಲಯದಲ್ಲಿ ರಾಷ್ಟ್ರೋತ್ಥಾನ ರಕ್ತಕೇಂದ್ರದ ರಕ್ತಕ್ಕಿರುವ ಸದಭಿಪ್ರಾಯವನ್ನು ಜ್ಞಾಪಿಸಿಕೊಂಡರು.
ರಾಷ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಶಿಬಿರ ಆಯೋಜಕರ ಅಮೂಲ್ಯ ಸಲಹೆಗಳಿಗೆ ಕಿವಿಯಾದರು.
- ಆಸ್ಪತ್ರೆಗಳವರು ರಕ್ತವನ್ನು ರಕ್ತಕೇಂದ್ರಗಳಿಂದ ನೇರವಾಗಿಯೂ ಸ್ವೀಕರಿಸುವಂತಾಗಬೇಕು. ಖುದ್ದು ದಾನಿಗಳೇ ಆಸ್ಪತ್ರೆಗೆ ಬಂದು ರಕ್ತದಾನ ಮಾಡುವಂತೆ ಒತ್ತಾಯ ಮಾಡಬಾರದು.
- ರಕ್ತಕೇಂದ್ರದ ಅಗತ್ಯಕ್ಕೆ ಅನುಸಾರವಾಗಿ ರಕ್ತದಾನ ಶಿಬಿರಗಳ ಆಯೋಜನೆ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆ, ಶಿಕ್ಷಕರ ದಿನಾಚರಣೆ, ಗಾಂಧೀ ಜಯಂತಿ ಮೊದಲಾದ ದಿನಗಳಂದೇ ಶಿಬಿರಗಳನ್ನು ಆಯೋಜಿಸಬೇಕೆಂದು ಹಠಕ್ಕೆ ಬೀಳಬಾರದು.
- ಮಾಲ್ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲೂ ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು.
- ರಕ್ತದಾನದ ಅನಿವಾರ್ಯತೆ ಹಾಗೂ ಅನುಕೂಲಗಳ ಬಗೆಗೆ ಸಾರ್ವಜನಿಕರಲ್ಲಿ ಹೆಚ್ಚು-ಹೆಚ್ಚು ಅರಿವು ಮೂಡುವ ಕೆಲಸಗಳಾಗಬೇಕು.
ಕಾರ್ಯಕ್ರಮದಲ್ಲಿ ಕಳೆದ 10 ವರ್ಷಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಸಹಕರಿಸಿದ ಸಂಘ-ಸಂಸ್ಥೆಗಳನ್ನು ಗೌರವಿಸಲಾಯಿತು:
ಬಿಡದಿ ಗೆಳೆಯರ ಬಳಗ: 2,698 ರಕ್ತದಾನಿಗಳ ಜೋಡಣೆ, 21 ವರ್ಷಗಳಿಂದ ಶಿಬಿರಗಳು
- ವಿನಾಯಕ ಸೇವಾ ಮಂಡಳಿ – ಜಾಲಹಳ್ಳಿ: 1,396 ರಕ್ತದಾನಿಗಳ ಜೋಡಣೆ, 20 ವರ್ಷಗಳಿಂದ ಶಿಬಿರಗಳು
- ಯಾದವ ಸೇವಾ ಸಮಿತಿ – ಗೋವಿಂದರಾಜನಗರ: 1,207 ರಕ್ತದಾನಿಗಳ ಜೋಡಣೆ
- ಬೆಂಗಳೂರು ನಾರ್ತ್ ಲೇಡಿಸಿ ಸರ್ಕಲ್: 19 ಶಿಬಿರಗಳಿಂದ 1,066 ರಕ್ತದಾನಿಗಳ ಜೋಡಣೆ, 19 ಶಿಬಿರಗಳು
- ಸ್ವಾಮಿ ವಿವೇಕಾನಂದ ಸೇವಾ ಮಂಡಳಿ – ಮತ್ತೀಕೆರೆ: 1,041 ರಕ್ತದಾನಿಗಳ ಜೋಡಣೆ
- ಎಲೈಟಾ ಪ್ರೊಮನೇಡ್ – ಜೆ ಪಿ ನಗರ: 14 ಶಿಬಿರಗಳ ಆಯೋಜನೆ
- ಮಿತ್ರ ಫೌಂಡೇಷನ್: 14 ಶಿಬಿರಗಳ ಆಯೋಜನೆ
- ಮಾಲೂರು ಬಿಜೆಪಿ ಘಟಕ: 800+ ರಕ್ತದಾನಿಗಳ ಜೋಡಣೆ, ಒಂದೇ ದಿನದಲ್ಲಿ 1,200 ಯೂನಿಟ್ ರಕ್ತಸಂಗ್ರಹ
- ಸಿಸ್ಕೋ ಸಿಸ್ಟಮ್ಸ್ ಇಂಡಿಯಾ ಪ್ರೈ. ಲಿ: 11,806 ರಕ್ತದಾನಿಗಳ ಜೋಡಣೆ, 19 ವರ್ಷಗಳಿಂದ ರಕ್ತದಾನ ಶಿಬಿರಗಳು, ಕಂಪೆನಿ ಉದ್ಯೋಗಿಗಳ ಸ್ವಯಂಸೇವಾ ಗೌರವ ಸಂಭಾವನೆ ಸಂರಕ್ಷಾ ತಲಸ್ಸೆಮಿಯಾ ಆರೈಕೆ ಕೇಂದ್ರಕ್ಕೆ ಕೊಡುಗೆಯಾಗಿ
- ಇನ್ಫೋಸಿಸ್ ಗ್ಲೋಬಲ್ ಎಡುಕೇಷನ್ ಸೆಂಟರ್, ಮೈಸೂರು: 3,747 ರಕ್ತದಾನಿಗಳ ಜೋಡಣೆ, 15 ವರ್ಷಗಳಿಂದ ಶಿಬಿರಗಳು
- ಐಬಿಎಂ ಇಂಡಿಯಾ ಪ್ರೈ ಲಿ: 2,525 ರಕ್ತದಾನಿಗಳ ಜೋಡಣೆ, 2 ವರ್ಷಗಳಲ್ಲಿ 9 ರಕ್ತದಾನ ಶಿಬಿರಗಳು
- ಶಿಂಡ್ಲರ್ ಎಲೆಕ್ಟ್ರಿಕ್ ಇಂಡಿಯಾ ಪ್ರೈ. ಲಿ: 1,811 ರಕ್ತದಾನಿಗಳ ಜೋಡಣೆ, 6 ವರ್ಷಗಳಲ್ಲಿ 17 ಶಿಬಿರಗಳ ಆಯೋಜನೆ
- ಕೆ.ಪಿ.ಐ.ಟಿ ಟೆಕ್ನಾಲಜೀಸ್ ಲಿ: 1,629 ರಕ್ತದಾನಿಗಳ ಜೋಡಣೆ, 6 ವರ್ಷಗಳಲ್ಲಿ 27 ಶಿಬಿರಗಳು
- ಡೆಲ್ ಇಂಡಿಯಾ ಪ್ರೈ. ಲಿ: 1,469 ರಕ್ತದಾನಿಗಳ ಜೋಡಣೆ, 13 ಶಿಬಿರಗಳು
- ಜಿ.ಎಕ್ಸ್.ಎಸ್. ಇಂಡಿಯಾ ಟೆಕ್ನಾಲಜಿ ಸೆಂಟರ್ ಪ್ರೈ ಲಿ: 8 ವರ್ಷಗಳಿಂದ ಶಿಬಿರಗಳು
- ಅಮೃತಾ ಸ್ಕೂಲ್ ಆಫ್ ಎಂಜಿನಿಯರಿಂಗ್: 3,464 ರಕ್ತದಾನಿಗಳ ಜೋಡಣೆ, 15 ವರ್ಷಗಳಿಂದ ಶಿಬಿರಗಳ ಆಯೋಜನೆ
- ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: 1,269 ರಕ್ತದಾನಿಗಳ ಜೋಡಣೆ, 18 ವರ್ಷಗಳಿಂದ ಶಿಬಿರಗಳ ಆಯೋಜನೆ
- ದಯಾನಂದ ಸಾಗರ್ ವಿಶ್ವವಿದ್ಯಾಲಯ: 1,039 ರಕ್ತದಾನಿಗಳ ಜೋಡಣೆ, 3 ವರ್ಷಗಳಲ್ಲಿ 9 ಶಿಬಿರಗಳು
- ಶ್ರೀ ಶ್ರೀ ಕಾಲೇಜ್ ಆಫ್ ಆಯುರ್ವೇದಿಕ್ ಸೈನ್ಸ್ ಎಂಡ್ ರಿಸರ್ಚ್: 6 ವರ್ಷಗಳಲ್ಲಿ 10 ಶಬಿರಗಳು
- ಜ್ಯೋತಿ ಕೇಂದ್ರೀಯ ವಿದ್ಯಾಲಯ: 10 ವರ್ಷಗಳಿಂದ ಶಿಬಿರಗಳು
- ನೃಪತುಂಗ ವಿಶ್ವವಿದ್ಯಾಲಯ: 4 ವರ್ಷಗಳಲ್ಲಿ 10 ಶಿಬಿರಗಳು
- ಬಿ.ಎನ್.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: 6 ವರ್ಷಗಳಿಂದ ಶಿಬಿರಗಳು
- ಪಿ.ಇ.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: 28 ವರ್ಷಗಳಿಂದ ಶಿಬಿರಗಳು
- ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: 28 ವರ್ಷಗಳಿಂದ ಶಿಬಿರಗಳು
- ದೊಡ್ಡಬಳ್ಳಾಪುರ ಇಂಡಸ್ಟ್ರೀಸ್ ಅಸೋಸಿಯೇಷನ್: 2,042 ರಕ್ತದಾನಿಗಳ ಜೋಡಣೆ, 6 ವರ್ಷಗಳಿಂದ ಶಿಬಿರಗಳು
- ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಎಂಪ್ಲಾಯೀಸ್ ಯೂನಿಯನ್: 1,543 ರಕ್ತದಾನಿಗಳ ಜೋಡಣೆ, 6 ವರ್ಷಗಳಿಂದ
- ಕೆನರಾ ಬ್ಯಾಂಕ್ – ಕೇಂದ್ರ ಕಚೇರಿ: 1,333 ರಕ್ತದಾನಿಗಳ ಜೋಡಣೆ, 10 ವರ್ಷಗಳಲ್ಲಿ 8 ಶಿಬಿರಗಳು
- ಕ್ಲೌಡ್‍ನೈನ್ ಹಾಸ್ಪಿಟಲ್: 7 ವರ್ಷಗಳಲ್ಲಿ 24 ಶಿಬಿರಗಳು
- ಬ್ಯಾಂಕ್ ಆಫ್ ಇಂಡಿಯಾ – ಕೇಂದ್ರ ಕಚೇರಿ: 7 ವರ್ಷಗಳಲ್ಲಿ 8 ಶಿಬಿರಗಳು
- ಹಿತೇನ್ ಫಾಸ್ಟ್-ನರ್ಸ್ ಪ್ರೈ. ಲಿ: 5 ವರ್ಷಗಳಿಂದ ಶಿಬಿರಗಳು
- ಟ್ರಿಡೆಂಟ್ ಆಟೋಮೊಬೈಲ್ಸ್ ಪ್ರೈ. ಲಿ: 1 ವರ್ಷದಲ್ಲಿ 12 ಶಿಬಿರಗಳು
ಇವರನ್ನೂ ಗೌರವಿಸಲಾಯಿತು:
ರಕ್ತಕೇಂದ್ರದ ಪ್ರಮುಖ ದಾನಿಗಳಾದ ಶ್ರೀ ಜಯಂತಿಲಾಲ್ ನಗರದಾಸ್ ಶಾ (ಜೈನ್)
- 1993ರಿಂದಲೂ ರಕ್ತಕೇಂದ್ರದಲ್ಲಿ ನಿರಂತರವಾಗಿ ಸ್ವಯಂಸೇಯಲ್ಲಿ ನಿರತರಾಗಿರುವ ಶ್ರೀಮತಿ ದಾಕ್ಷಾಯಿಣಿ ಲಕ್ಷ್ಮೀನಾರಾಯಣ
ಹಿತ್ತಲಗಿಡ ಮದ್ದಾಗಿದ್ದು ಹೀಗೆ…
ಕೊರೋನಾ ಕಾಲದಲ್ಲೂ ಅತಿಹೆಚ್ಚು ರಕ್ತಸಂಗ್ರಹ ಆಗಿದ್ದು ಆರ್.ಎಸ್.ಎಸ್, ಭಾಜಪಾ, ಸಮರ್ಥ ಭಾರತ ಹಾಗೂ ಯೂತ್ ಫಾರ್ ಸೇವಾದ ಸ್ವಯಂಸೇವಕರ ಪರಿಶ್ರಮದಿಂದ
- ರಾಷ್ಟ್ರೋತ್ಥಾನ ಯೋಗ ವಿಭಾಗದಿಂದ: 6,588 ರಕ್ತದಾನಿಗಳ ಜೋಡಣೆ, 10 ವರ್ಷಗಳಲ್ಲಿ 71 ಶಿಬಿರಗಳ ಆಯೋಜನೆ
- ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‍ಇ ಶಾಲೆಗಳಿಂದ: 8,145 ರಕ್ತದಾನಿಗಳ ಜೋಡಣೆ, 78 ಶಿಬಿರಗಳ ಆಯೋಜನೆ
ರಕ್ತದಾನ ಶಿಬಿರಗಳ ಆಯೋಜನೆಗೆ ಕೈಜೋಡಿಸಿದ ಸಂಘ-ಸಂಸ್ಥೆಗಳು:
ಸ್ವಯಂಸೇವಾ ಸಂಸ್ಥೆಗಳು – 143
- ಸಾಫ್ಟ್-ವೇರ್ ಕಂಪನಿಗಳು – 79
- ಶಿಕ್ಷಣ ಸಂಸ್ಥೆಗಳು – 62
- ಇತರ ಕಂಪನಿಗಳು – 48
- ಸಣ್ಣಪುಟ್ಟ ಆಯೋಜನೆಗಳಲ್ಲಿ – 22 ಶಿಬಿರಗಳು
ರಾಷ್ಟ್ರೋತ್ಥಾನ ರಕ್ತಕೇಂದ್ರ – ಬೆಂಗಳೂರು 1993ರಲ್ಲಿ ಪ್ರಾರಂಭವಾಗಿ 2025ರ ಪರ್ಯಂತ ಸೇವೆಯ ಮುಖ್ಯಾಂಶಗಳು:
ರಕ್ತದಾನ ಶಿಬಿರಗಳು – 6,143
- ರಕ್ತ ದಾನಿಗಳು – 5,24,420
- ರಕ್ತ ಸಂಗ್ರಹ – 10,84,215 ಯೂನಿಟ್
- ರಕ್ತ ವಿತರಣೆ – 10,52,234 ಯೂನಿಟ್
ಕೊರೋನಾ ಕಾಲದ ಸಾಧನೆ:
ರಕ್ತದಾನ ಶಿಬಿರಗಳು – 229
- ರಕ್ತದಾನಿಗಳು – 20,423
- ರಕ್ರ ಸಂಗ್ರಹ – 44,463 ಯೂನಿಟ್
ಉಚಿತ ರಕ್ತ ವಿತರಣೆಯ ವಿಚಾರ:
ಸಂರಕ್ಷಾ: ತಲಸ್ಸೆಮಿಯಾ ಆರೈಕೆ ಕೇಂದ್ರಕ್ಕೆ – 76,292 ಯೂನಿಟ್
- ಸರ್ಕಾರಿ ಆಸ್ಪತ್ರೆಗಳಿಗೆ -18,320 ಯೂನಿಟ್
ರಿಯಾಯಿತಿಯಲ್ಲಿ ರಕ್ತ ವಿತರಣಾ ವಿವರ:
ಸರ್ಕಾರಿ ಆಸ್ಪತ್ರೆಗಳಿಗೆ – 6,72,131 ಯೂನಿಟ್
ರಕ್ತಕೇಂದ್ರದ ಸೇವಾ ಉತ್ಕೃಷ್ಟತೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು:
’ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ’ಯಿಂದ ಅನುಮೋದನೆ ಮತ್ತು ನೆರವು.
- ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 2011-12ನೇ ಸಾಲಿನ ’ಕರ್ನಾಟಕದ ಅತ್ಯುತ್ತಮ ರಕ್ತನಿಧಿ’ ಗೌರವ.
- ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ವತಿಯಿಂದ 2020-21ನೇ ಸಾಲಿನಲ್ಲಿ ’ಅತಿ ಹೆಚ್ಚು ರಕ್ತ ಸಂಗ್ರಹ’ ಮಾಡಿದ್ದಕ್ಕಾಗಿ ಗೌರವ.
https://bloodcentre.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanabloodcentre #bloodcentre #blood #blooddonation #blooddonationcamp
Project Info
- Category: News & Media
- Location: Keshavashilpa,Bengaluru
- Completed Date: 06 Sept 2025


























