
Poster Launch of the 37-Day (Nov. 1 – Dec. 7) 5th Kannada Book Festival
Bengaluru, Sep. 3: The poster of the 5th Kannada Pustaka Habba – 2025, organized by Rashtrottana Sahitya, was unveiled at Keshava Shilpa here by Rashtrottana Parishat President Sri M. P. Kumar and General Secretary Sri Na. Dinesh Hegde.
37 ದಿನಗಳ (ನ. 1- ಡಿ. 7) 5ನೇ ಕನ್ನಡ ಪುಸ್ತಕ ಹಬ್ಬದ ಭಿತ್ತಿಪತ್ರ ಬಿಡುಗಡೆ
ಬೆಂಗಳೂರು, ಸ. 3: ರಾಷ್ಟ್ರೋತ್ಥಾನ ಸಾಹಿತ್ಯವು ಆಯೋಜಿಸುತ್ತಿರುವ 5ನೇ ಕನ್ನಡ ಪುಸ್ತಕ ಹಬ್ಬ – 2025ರ ಭಿತ್ತಿಪತ್ರವನ್ನು ರಾಷ್ಟ್ರೋತ್ಥಾನ ಪರಿಷತ್ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಇಲ್ಲಿನ ಕೇಶವಶಿಲ್ಪದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಹಿರಿಯ ವ್ಯವಸ್ಥಾಪಕರಾದ ಶ್ರೀ ಉಮೇಶ್ ಕುಮಾರ್, ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕರಾದ ಶ್ರೀ ವಿಘ್ನೇಶ್ವರ ಭಟ್, ಸಂವಿತ್ ರಿಸರ್ಚ್ ಫೌಂಡೇಷನ್ ನಿರ್ದೇಶಕರಾದ ಶ್ರೀ ಸುಬ್ರಹ್ಮಣ್ಯ ಬಿ ಎ, ಲೇಖಕರುಗಳಾದ ಡಾ. ಅಜಕ್ಕಳ ಗಿರೀಶ್ ಭಟ್, ಶ್ರೀ ಮಂಜುನಾಥ ಅಜ್ಜಂಪುರ, ಶ್ರೀ ದಿವಾಕರ ಹೆಗಡೆ ಕೆರೆಹೊಂಡ, ಶ್ರೀ ಹರಿ ರವಿಕುಮಾರ್ ಹಾಗೂ ರಾಷ್ಟ್ರೋತ್ಥಾನ ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀ ನಾರಾಯಣ ಕೆ. ಎಸ್, ಶ್ರೀ ರವಿಕುಮಾರ್ ಬಿ. ಎಸ್. ಉಪಸ್ಥಿತರಿದ್ದರು.
ಕನ್ನಡ ಪುಸ್ತಕ ಹಬ್ಬವು ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದಿಂದ ಆರಂಭಿಸಿ, ಡಿಸೆಂಬರ್ 7ರ ವರೆಗೆ 37 ದಿನಗಳ ಕಾಲ ರಾಷ್ಟ್ರೋತ್ಥಾನದ ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು, ಇಲ್ಲಿ ನಡೆಯಲಿದೆ.
37 ದಿನಗಳ ಸಾಹಿತ್ಯ-ಸಂಸ್ಕೃತಿ ಉತ್ಸವದಲ್ಲಿ, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, ಪುಸ್ತಕ ಪ್ರೇಮಿಗಳು ಶೇ. 10 ರಿಂದ ಶೇ. 50ರ ವರೆಗೂ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಕೊಳ್ಳಬಹುದಾಗಿದೆ. ಈ ಪುಸ್ತಕ ಹಬ್ಬದಲ್ಲಿ ಹೊಸ ಪುಸ್ತಕಗಳ ಲೋಕಾರ್ಪಣೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ಸಾಹಿತ್ಯ-ಸಂಸ್ಕೃತಿ ಸಂಬಂಧಿತ ಚರ್ಚೆ, ಸಂವಾದ, ಉಪನ್ಯಾಸಗಳನ್ನೂ ಆಯೋಜಿಸಲಾಗುತ್ತಿದೆ. ಸಂಗೀತ – ನೃತ್ಯ – ತಾಳಮದ್ದಳೆ – ಹರಿಕಥೆ – ಯಕ್ಷಗಾನ ಸೇರಿದಂತೆ ವೈವಿಧ್ಯಮಯ ಸಾಂಸ್ತಿಕ ಸಂಜೆಗಳು ಬೆಂಗಳೂರಿಗರ ಮನಸೂರೆಗೊಳ್ಳಲಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 94801 95130, 94806 45130, 95352 13721
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaSahitya #RashtrotthanaSahityaBooks #ಕನ್ನಡಪುಸ್ತಕಹಬ್ಬ #ಕನ್ನಡಪುಸ್ತಕಹಬ್ಬ2025 #KannadaPustakaHabba #KPH2025
Project Info
- Category: News & Media
- Location: Bengaluru
- Completed Date: 03 Sept 2025







